ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪರಮಾಣು ಶಸ್ತ್ರಾಸ್ತ್ರವನ್ನು ಎಲ್ಲಾ ದೇಶಗಳು ನಿಷೇಧಿಸಲಿ: ಇರಾನ್ (Hiroshima | Iran | Nuclear arms | ban | US | Barack Obama)
Bookmark and Share Feedback Print
 
'ಪರಮಾಣು ಶಸ್ತ್ರಾಸ್ತ್ರ ನಿಶ್ಯಸ್ತ್ರೀಕರಣಕ್ಕೆ ಜಾಗತಿಕವಾಗಿ ಎಲ್ಲಾ ದೇಶಗಳು ಬದ್ಧತೆ ತೋರಲಿ' ಎಂದಿರುವ ಇರಾನ್ ಪರಮಾಣು ವ್ಯವಹಾರಗಳ ಸಂಧಾನಕಾರ ಸಯೀದ್ ಜಲೀಲಿ ಅಭಿಪ್ರಾಯವ್ಯಕ್ತಪಡಿಸಿದ್ದು, ಆದರೆ ಪರಮಾಣು ಶಕ್ತಿಯನ್ನು ಅಭಿವೃದ್ಧಿಪಡಿಸಲು ಎಲ್ಲಾ ದೇಶಗಳಿಗೂ ಹಕ್ಕಿದೆ ಎಂದು ಅಮೆರಿಕಕ್ಕೆ ತಿರುಗೇಟು ನೀಡಿದ್ದಾರೆ.

ನಾವು ದೇಶದಲ್ಲಿ ಕೈಗೊಂಡಿರುವ ಪರಮಾಣು ಕಾರ್ಯಚಟುವಟಿಕೆ ನಾಗರಿಕರ ಉದ್ದೇಶಕ್ಕಾಗಿ ಮಾಡಲಾಗುತ್ತಿದೆ ಎಂದರು. ಅಮೆರಿಕ ಮತ್ತು ಇನ್ನುಳಿದ ದೇಶಗಳು ಮಾತ್ರ ಶಸ್ತ್ರಾಸ್ತ್ರ ಉತ್ಪಾದನೆ ಬಗ್ಗೆ ಆತಂಕವ್ಯಕ್ತಪಡಿಸುತ್ತಿವೆ ಎಂದು ಸೋಮವಾರ ಜಪಾನ್‌ಗೆ ಭೇಟಿ ನೀಡಿದ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.

'ಅಮೆರಿಕ ಹಿರೋಶಿಮಾದಲ್ಲಿ ನಡೆಸಿರುವ ಪರಮಾಣು ದಾಳಿಯಂತಹ ಭೀಭತ್ಸ ಘಟನೆ ಮತ್ತೆಂದಿಗೂ ನಡೆಯದಿರಲಿ' ಎಂದು ತಿಳಿಸಿದರು. ಇರಾನ್‌ನಲ್ಲಿ ಎಲ್ಲಾ ದೇಶಗಳ ವಿರೋಧದ ನಡುವೆಯೂ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಅಮೆರಿಕ ಈಗಾಗಲೇ ಆತಂಕ ವ್ಯಕ್ತಪಡಿಸಿ, ಪರಮಾಣು ನಿಶ್ಯಸ್ತ್ರೀಕರಣಕ್ಕೆ ಸಹಿ ಹಾಕುವಂತೆ ಡಿಸೆಂಬರ್‌ವರೆಗೆ ಅಂತಿಮ ಗಡುವು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ