ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸತತ ಎರಡನೇ ದಿನವೂ ಮುಂದುವರಿದ ನೇಪಾಳ ಬಂದ್ (Nepal | Kathmandu | Maoist | Bundh)
Bookmark and Share Feedback Print
 
ನೇಪಾಳ ಸರಕಾರದ ವಿರುದ್ಧ ಮಾವೋವಾದಿಗಳು ಕರೆ ನೀಡಿರುವ ಮೂರು ದಿನಗಳ ಬಂದ್ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ರಾಜಧಾನಿ ಕಾಠ್ಮಂಡು ಸೇರಿದಂತೆ ಹಲವು ಪ್ರಮುಖ ನಗರಗಳು ಒತ್ತಾಯಪೂರ್ವಕವಾಗಿ ನಿಷ್ಕ್ರಿಯಗೊಂಡಿವೆ.

ಮಾವೋವಾದಿಗಳು ಸರಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ರಾಜಧಾನಿಯ ಬೀದಿಗಳಲ್ಲಿ ರ‌್ಯಾಲಿಗಳನ್ನು ನಡೆಸಿದ್ದರಿಂದ ಬಸ್ಸುಗಳು ಮತ್ತು ಕಾರುಗಳು ಇಂದು ಕೂಡ ರಸ್ತೆಗಿಳಿದಿಲ್ಲ. ಜತೆಗೆ ಪ್ರಮುಖ ಮಾರಾಟ ಮಳಿಗೆಗಳು, ಮಾರುಕಟ್ಟೆ ಪ್ರದೇಶಗಳು, ಶಾಲಾ-ಕಾಲೇಜುಗಳು ತೆರೆದಿಲ್ಲ.

ಬಹುತೇಕ ಕಾರ್ಖಾನೆಗಳು ಮತ್ತು ವ್ಯಾಪಾರೀ ಕೇಂದ್ರಗಳು ಕಾರ್ಯಾಚರಿಸಿಲ್ಲ. ಆದರೆ ಕೆಲವು ಬ್ಯಾಂಕುಗಳು, ಸರಕಾರಿ ಕಚೇರಿಗಳು ಮತ್ತು ಉದ್ಯಮ ಕೇಂದ್ರಗಳು ವ್ಯವಹಾರ ನಡೆಸಿದ ಬಗ್ಗೆ ವರದಿಗಳು ಬಂದಿವೆ.

ನಿನ್ನೆಗೆ ಹೋಲಿಸಿದರೆ ಇಂದು ನಗರದ ಒಳ ಪ್ರದೇಶಗಳಲ್ಲಿ ಕೆಲವು ಅಂಗಡಿ-ಮುಂಗಟ್ಟುಗಳು ವ್ಯವಹಾರ ನಡೆಸುತ್ತಿವೆ. ಆದರೂ ಹೆಚ್ಚಿನ ಮಳಿಗೆಗಳು ಮಾವೋವಾದಿಗಳ ದಾಳಿ ಭೀತಿಯಿಂದಾಗಿ ತೆರೆಯುವ ಧೈರ್ಯ ಮಾಡಿಲ್ಲ.

ಜತೆಗೆ ಪ್ರವಾಸಿಗರು ಕೂಡ ಸಾಕಷ್ಟು ತೊಂದರೆಗೊಳಗಾದ ವರದಿಗಳೂ ಬಂದಿವೆ. ಇಲ್ಲಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವವರು ಮತ್ತು ವಾಪಸ್ ಬರುವ ಪ್ರಯಾಣಿಕರು ತಮ್ಮ ಬ್ಯಾಗುಗಳನ್ನು ತಾವೇ ಹೊತ್ತು ಅಥವಾ ರಿಕ್ಷಾಗಳಲ್ಲಿ ಕೊಂಡೊಯ್ಯಲು ತ್ರಾಸಪಡುತ್ತಿರುವ ಸ್ಥಿತಿ ಸಾಮಾನ್ಯವಾಗಿತ್ತು.

ಕಾಠ್ಮಂಡುವಿನ ಪಂಚತಾರಾ ಹೊಟೇಲುಗಳಲ್ಲಿನ ಎಲ್ಲಾ ಏಳು ಕ್ಯಾಸಿನೋ ಕೇಂದ್ರಗಳು ಇಂದು ಕೂಡ ವ್ಯವಹಾರ ನಡೆಸಿಲ್ಲ. ಇದರಿಂದಾಗಿ ಮಿಲಿಯನ್‌ಗಟ್ಟಲೆ ನಷ್ಟವಾಗಿದೆ ಎಂದು ಕ್ಯಾಸಿನೋ ಆಡಳಿತ ಮಂಡಳಿ ತಿಳಿಸಿದೆ.

ನಿನ್ನೆ ಮಾವೋವಾದಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವಿನ ಘರ್ಷಣೆಯಿಂದಾಗಿ 24 ಮಂದಿ ಗಾಯಗೊಂಡಿದ್ದರು. ಇದರಲ್ಲಿ ಹಲವು ಪೊಲೀಸರು ಕೂಡ ಗಾಯಾಳುಗಳಾಗಿದ್ದು, ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ