ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯಾವುದೇ ಭ್ರಷ್ಟಾಚಾರ ಎಸಗಿಲ್ಲ: ಇಸ್ರೇಲ್ ಮಾಜಿ ಪ್ರಧಾನಿ (Olmert | graft trial | court | criminal charges)
Bookmark and Share Feedback Print
 
'ತಾನು ಯಾವುದೇ ಭ್ರಷ್ಟಾಚಾರ ಎಸಗಿಲ್ಲ' ಎಂದಿರುವ ಇಸ್ರೇಲ್ ಮಾಜಿ ಪ್ರಧಾನಿ ಇಹುದ್ ಓಲ್ಮಾರ್ಟ್,ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ಅಲ್ಲಗಳೆದಿದ್ದಾರೆ.

'ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಆರೋಪಗಳನ್ನು ತಮ್ಮ ಕಕ್ಷಿದಾರರು(ಓಲ್ಮಾರ್ಟ್)ಸಂಪೂರ್ಣವಾಗಿ ಅಲ್ಲಗಳೆದಿರುವುದಾಗಿ ಓಲ್ಮಾರ್ಟ್ ವಕೀಲರಾದ ಇಲೈ ಜೋಹಾರ್ ನ್ಯಾಯಾಲಯಕ್ಕೆ ತಿಳಿಸಿರುವುದಾಗಿ ಇಸ್ರೇಲ್ ಮಾಧ್ಯಮವೊಂದರ ವರದಿ ತಿಳಿಸಿದೆ.

ಕೋರ್ಟ್ ಮನವಿ ಸಲ್ಲಿಸುವ ವೇಳೆ ಸ್ವತಃ ಮಾಜಿ ಪ್ರಧಾನಿ ಓಲ್ಮಾರ್ಟ್ ನ್ಯಾಯಾಲಯದಲ್ಲಿ ಹಾಜರಿದ್ದರು. ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಇಸ್ರೇಲ್‌ನ ಮಾಜಿ ಪ್ರಧಾನಿಯವರಲ್ಲಿ ಓಲ್ಮಾರ್ಟ್ ಮೊದಲಿಗರಾಗಿದ್ದಾರೆ.

ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಇಸ್ರೇಲ್ ಪ್ರಧಾನಿ ಓಲ್ಮಾರ್ಟ್ ರಾಜೀನಾಮೆಗೆ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ 2008ರ ಸೆಪ್ಟೆಂಬರ್‌ನಲ್ಲಿ ಅವರು ತಮ್ಮ ಅಧಿಕಾರದ ಗದ್ದುಗೆಯಿಂದ ಕೆಳಗಿಳಿದಿದ್ದರು. ಆದರೆ ಓಲ್ಮಾರ್ಟ್ ಪ್ರತಿಬಾರಿಯೂ ತಾನು ನಿರಪರಾಧಿ ಎಂದು ಸಾರುತ್ತಲೇ ಬಂದಿದ್ದಾರೆ. ಶುಕ್ರವಾರವೂ ಕೂಡ ಸುದ್ದಿಗಾರರೊಂದಿಗೆ ಮಾತನಾಡಿ, ವಿಚಾರಣೆಯಲ್ಲಿ ತಾನು ನಿರಪರಾಧಿ ಎಂಬುದು ಸಾಬೀತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ