ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಖ್ಯಾತ ನಟಿ ಬ್ರಿಟಾನಿ ಮರ್ಫಿ ಹೃದಯಾಘಾತದಿಂದ ನಿಧನ (Brittany Murphy | Clueless | Girl Interrupted | actress)
Bookmark and Share Feedback Print
 
ಕ್ಲೂಲೆಸ್ ಮತ್ತು ಗರ್ಲ್ ಇಂಟರಪ್ಟೆಡ್ ಮುಂತಾದ ಸಿನಿಮಾಗಳಲ್ಲಿ ಗಮನ ಸೆಳೆದಿದ್ದ ಅಮೆರಿಕಾದ ಖ್ಯಾತ ನಟಿ ಬ್ರಿಟಾನಿ ಮರ್ಫಿ, ಸ್ನಾನದ ಕೋಣೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

32ರ ಹರೆಯದ ಈ ನಟಿ ಹಾಲಿವುಡ್ ಹಿಲ್ಸ್‌ನಲ್ಲಿನ ತನ್ನ ಮನೆಯ ಬಾತ್ ರೂಂನಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಸಂದರ್ಭದಲ್ಲಿ ಗಮನಿಸಿದ ಆಕೆಯ ತಾಯಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಆದರೆ ಈ ಸಾವು ಹಲವು ಸಂಶಯಗಳಿಗೆ ಎಡೆ ಮಾಡಿದೆ ಎಂದು ಸೆಲೆಬ್ರಿಟಿಗಳ ಗಾಸಿಪ್ ವೆಬ್‌ಸೈಟ್ ಟಿಎಂಜೆಡ್ ವರದಿ ಮಾಡಿದೆ. ಆಕೆ ಬಹುಶಃ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಕಾರಣ ಭಾರೀ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸುತ್ತಿದ್ದರು. ಈ ಸಂಬಂಧ ಹಲವು ಮದ್ದಿನ ಚೀಟಿಗಳು ಕೂಡ ಆಕೆಯ ಮನೆಯಲ್ಲಿ ಪತ್ತೆಯಾಗಿವೆ. ಸ್ನಾನದ ಕೋಣೆ ಅಕ್ಕ-ಪಕ್ಕ ನಟಿ ವಾಂತಿ ಮಾಡಿರುವುದು ಕೂಡ ಕಂಡು ಬಂದಿದೆ ಎಂದು ಹೇಳಿದೆ.

ಬ್ರಿಟಾನಿಯವರ ಅಗಲಿಕೆ ನಮಗೆ ಆಘಾತ ತಂದಿದೆ. ಅವರು ನಮ್ಮ ಮಗಳು, ಪತ್ನಿ, ಪ್ರೀತಿ ಮತ್ತು ಮಿನುಗುತ್ತಿದ್ದ ತಾರೆಯಾಗಿದ್ದವರು. ನಮ್ಮ ಖಾಸಗಿ ಕ್ಷಣಗಳನ್ನು ಎಲ್ಲರೂ ಗೌರವಿಸುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ಮರ್ಫಿ ಕುಟುಂಬದ ಮೂಲಗಳು ಹೇಳಿವೆ.

ಮರ್ಫಿ ಇತ್ತೀಚಿನ ಕೆಲ ವರ್ಷಗಳಿಂದ ಸಿನಿಮಾ ವಲಯದಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದರು. ಕಡಿಮೆ ಬಜೆಟ್ ಚಿತ್ರಗಳಲ್ಲಿ ನಟಿಸುವುದರಲ್ಲೇ ಆಕೆ ಕಳೆದು ಹೋಗಿದ್ದರೂ, ಸಿನಿಮಾ ನಂಟನ್ನು ಕಳೆದುಕೊಂಡಿರಲಿಲ್ಲ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ