ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೆಕ್ಸಿಕೋ ನಗರ: 'ಸಲಿಂಗಿ'ಗಳ ಮದುವೆಗೆ ಗ್ರೀನ್ ಸಿಗ್ನಲ್ (Latin American | Mexico City | gay | marriage | Europeans)
Bookmark and Share Feedback Print
 
PTI
'ಸಲಿಂಗಿಗಳ ಮದುವೆಗೆ' ಮೆಕ್ಸಿಕೋ ನಗರ ಸಂಸದರು ಅಧಿಕೃತವಾಗಿ ಒಪ್ಪಿಗೆ ಸೂಚಿಸಿರುವುದಾಗಿ ನಗರ ಸಚಿವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಸಲಿಂಗಿಗಳ ಮದುವೆ ಕುರಿತಂತೆ ಮಂಡಿಸಿದ್ದ ನಿರ್ಣಯಕ್ಕೆ ಐದು ಮುಂದೂಡಿಕೆಯ ನಂತರ ಕೊನೆಗೂ 39ಮತಗಳು ಪರವಾಗಿ ಬಿದ್ದಿದ್ದು, 20ಮತಗಳು ವಿರುದ್ಧವಾಗಿ ಚಲಾವಣೆಯಾಗಿದೆ ಎಂದು ಅಸೆಂಬ್ಲಿಯ ವಕ್ತಾರ ಡೇವಿ ರಾಝು ಹೇಳಿದ್ದಾರೆ.

ಸಲಿಂಗಿ ಮದುವೆ ಕುರಿತಂತೆ ಸಂವಿಧಾನ ತಿದ್ದುಪಡಿಗೆ ನಗರದ ಪ್ರಮುಖ ವಿರೋಧ ಪಕ್ಷವಾಗಿರುವ ಎಡಪಂಥೀಯ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ವಿಫಲವಾಗಿರುವಂತೆಯೇ, ಸಲಿಂಗಿ ಜೋಡಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ನಿರ್ಣಯಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಆಸ್ಕರ್ ಓಲಿವರ್ ತಿಳಿಸಿದ್ದಾರೆ.

ಮೆಕ್ಸಿಕೋದಲ್ಲಿ ಶತಮಾನಗಳಿಂದ ಬಿಳಿಯರು ಮತ್ತು ಕಪ್ಪು ಜನಾಂಗದವರ ಮದುವೆ ಅಥವಾ ಯುರೋಪಿಯನ್ ಮತ್ತು ಇಂಡಿಯನ್ಸ್ ವಿವಾಹವನ್ನು ನಿಷೇಧಿಸಲಾಗಿತ್ತು ಎಂದು ಡೆಮೋಕ್ರಟಿಕ್ ರೆವಲ್ಯೂಶನರಿ ಪಕ್ಷದ(ಪಿಆರ್‌ಡಿ) ಸಚಿವ ವಿಕ್ಟರ್ ರೋಮೋ ವಿವರಿಸಿದ್ದಾರೆ.

ಆದರೆ ಇಂದು ಸಲಿಂಗಿಗಳ ಮದುವೆಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡುವ ಮೂಲಕ ನಿಷೇಧಕ್ಕೊಳಗಾದ ಕಾಯ್ದೆ ಅಸ್ತಿತ್ವ ಕಳೆದುಕೊಂಡಂತಾಗಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ