ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಪ್ರೆಸ್ ಕ್ಲಬ್ ಬಳಿ ಬಾಂಬ್ ಸ್ಫೋಟ-3ಬಲಿ (Press Club | suicide blast | Pakistan | Peshawar)
Bookmark and Share Feedback Print
 
ಪೇಶಾವರದ ಪ್ರೆಸ್ ಕ್ಲಬ್ ಹೊರಭಾಗದಲ್ಲಿ ಮಂಗಳವಾರ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಪತ್ರಕರ್ತರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಕೈಯಲ್ಲಿ ಸ್ಫೋಟಕವನ್ನು ಹಿಡಿದು ಪ್ರೆಸ್ ಕ್ಲಬ್ ಆವರಣದೊಳಗೆ ಪ್ರವೇಶಿಸಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬ ತಡೆಯಲು ಯತ್ನಿಸಿದ್ದರು. ಆದರೆ ಆತ್ಮಹತ್ಯಾ ಬಾಂಬರ್ ಸ್ಫೋಟಿಸಿಕೊಂಡ ಪರಿಣಾಮ ಪೊಲೀಸ್ ಸಿಬ್ಬಂದಿ ಸೇರಿದಂತೆ ಮೂರು ಮಂದಿ ಬಲಿಯಾಗಿರುವುದಾಗಿ ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿದೆ.

ಈ ಸ್ಫೋಟದಿಂದಾಗಿ ಹಲವು ಪತ್ರಕರ್ತರು ಗಾಯಗೊಂಡಿದ್ದಾರೆ. ಇತ್ತೀಚೆಗೆ ಉಗ್ರರು ಪೇಶಾವರದಲ್ಲಿ ನಡೆಸಿರುವ ಸರಣಿ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ನೂರಾರು ಮಂದಿ ಬಲಿಯಾಗಿದ್ದರು.

ಪ್ರೆಸ್ ಕ್ಲಬ್ ಸಮೀಪ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿದ ಘಟನೆ ಬಗ್ಗೆ ಈವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತುಕೊಂಡಿಲ್ಲ. ಸ್ಫೋಟದಿಂದಾಗಿ ಪ್ರೆಸ್ ಕ್ಲಬ್ ಜಖಂಗೊಂಡಿದ್ದು,ಕಿಟಿಕಿ, ಬಾಗಿಲುಗಳು ಧ್ವಂಸವಾಗಿವೆ. ದಾಳಿ ನಡೆದ ಸಂದರ್ಭದಲ್ಲಿ ತುಂಬಾ ಮಂದಿ ಪ್ರೆಸ್ ಕ್ಲಬ್‌ನಲ್ಲಿ ಹಾಜರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ