ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮೂಗು, ಕಿವಿ ಕತ್ತರಿಸಿ ಎಂದು ಆದೇಶ ನೀಡಿದೆ ಪಾಕ್ ಕೋರ್ಟ್! (Nose | Ear | Woman | Pakistan)
Bookmark and Share Feedback Print
 
ಮಹಿಳೆಯೊಬ್ಬಳನ್ನು ಅಪಹರಿಸಿ ಆಕೆಯ ಮೂಗು ಹಾಗೂ ಕಿವಿಗಳನ್ನು ಕತ್ತರಿಸಿದ್ದ ಇಬ್ಬರು ಆರೋಪಿಗಳಿಗೆ ಪಾಕಿಸ್ತಾನದ ನ್ಯಾಯಾಲಯವೊಂದು ಅದೇ ರೀತಿಯ ಶಿಕ್ಷೆ ವಿಧಿಸುವಂತೆ ಆದೇಶ ನೀಡಿ ಅಚ್ಚರಿ ಹುಟ್ಟಿಸಿದೆ.

ಲಾಹೋರ್‌ನಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಮೂರ್ತಿ ಖಾಲಿದ್ ನವೇದ್ ದಾರ್ ಈ ತೀರ್ಪನ್ನು ನೀಡಿದ್ದಾರೆ. ಜೀವಾವಧಿ ಶಿಕ್ಷೆ ಹಾಗೂ ಪ್ರತಿಯೊಬ್ಬರಿಗೂ ತಲಾ ಏಳು ಲಕ್ಷ ರೂಪಾಯಿಗಳಂತೆ ದಂಡವನ್ನೂ ವಿಧಿಸಲಾಗಿದೆ.

ಇಸ್ಲಾಮಿಕ್ ಕಾನೂನಿನ ಪ್ರಕಾರ ಶೇರ್ ಮೊಹಮ್ಮದ್ ಮ್ತತು ಅಮಾನತ್ ಆಲಿ ಎಂಬಿಬ್ಬರಿಗೆ ಮೂಗಿಗೆ ಮೂಗು ಹಾಗೂ ಕಿವಿಗೆ ಕಿವಿಯನ್ನು ಕತ್ತರಿಸುವಂತೆ ನ್ಯಾಯಾಲಯವು ಆದೇಶ ನೀಡಿದೆ ಎಂದು ನ್ಯಾಯಾಂಗದ ಅಧಿಕಾರಿ ಅಝರ್ ಅಮೀನ್ ತಿಳಿಸಿದ್ದಾರೆ.

ಇವರಲ್ಲೊಬ್ಬರನ್ನು ಮದುವೆಯಾಗಲು ಮಹಿಳೆ ನಿರಾಕರಿಸಿದ್ದಕ್ಕೆ ಆಕೆಯನ್ನು ಅಪಹರಿಸಿ ಮೂಗು ಹಾಗೂ ಕಿವಿಗಳನ್ನು ಛೇದಿಸಿದ್ದ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ಸಾಬೀತಾಗಿತ್ತು.

ಪಾಕಿಸ್ತಾನದ ನ್ಯಾಯಾಲಯಗಳು ಈ ಹಿಂದೆಯೂ ಇದೇ ರೀತಿಯ ಶಿಕ್ಷೆಗಳನ್ನು ಪ್ರಕಟಿಸಿವೆಯಾದರೂ, ಇದುವರೆಗೆ ಯಾರೂ ಶಿಕ್ಷೆಯನ್ನು ಅನುಭವಿಸಿಲ್ಲ. ಮೇಲ್ಮನವಿ ಸಲ್ಲಿಸುವ ಅವಕಾಶವಿರುವುದರಿಂದ ಎಲ್ಲರೂ ಈ ಕಠಿಣ ಶಿಕ್ಷೆಯಿಂದ ಪಾರಾಗುತ್ತಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ