ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುರೋಪ್: ಮೈಕೊರೆಯುವ ಹಿಮಪಾತಕ್ಕೆ 80 ಬಲಿ (Cold | snap | freeze | Europe | travellers | Croatian)
Bookmark and Share Feedback Print
 
ಯುರೋಪ್ ಖಂಡದಾದ್ಯಂತ ಬೀಸುತ್ತಿರುವ ಶೀತಮಾರುತಕ್ಕೆ ಸಿಲುಕಿ ಸುಮಾರು 80ಮಂದಿ ಸಾವನ್ನಪ್ಪಿದ್ದಾರೆ. ಶೀತಗಾಳಿಯಿಂದ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ರಕ್ತ ಹೆಪ್ಪುಗಟ್ಟಿಸುವಂತಹ ಶೀತಗಾಳಿಯಿಂದಾಗಿ ಲಂಡನ್ ಮತ್ತು ಪ್ಯಾರೀಸ್ ನಡುವೆ ಸಂಚರಿಸುವ ರೈಲುಗಳನ್ನು ರದ್ದುಪಡಿಸಲಾಗಿದೆ. ಅಲ್ಲದೆ, ವಿಮಾನ ಹಾರಾಟವನ್ನು ಕೂಡ ರದ್ದುಪಡಿಸಲಾಗಿದೆ. ವಿದ್ಯುತ್ ಪೂರೈಕೆ ಕಡಿತಗೊಳಿಸಲಾಗಿದೆ.

ರಸ್ತೆ ಹಾಗೂ ರೈಲು ಮಾರ್ಗಗಳಲ್ಲಿ ಹಿಮ ಬೀಳುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಕೊಟ್ರೈನ್‌ನಲ್ಲಿ ಮೈನಸ್ 17ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ. ತಾಪಮಾನ ಸಂಪೂರ್ಣ ಕುಸಿದಿದೆ ಎಂದು ರಾಷ್ಟ್ರೀಯ ವಾಹಿನಿ ವರದಿ ಮಾಡಿದೆ. ಯುರೋಪ್‌ನಲ್ಲಿ ಮೈಸಸ್ 33.6ಡಿಗ್ರಿ ಸೆಲ್ಸಿಯಸ್ ತಾಪಮಾನ ಇದೆ.

ಪೋಲ್ಯಾಂಡ್‌ನಲ್ಲಿ ಮನೆ ಇಲ್ಲದ 42ಮಂದಿ ಶೀತಗಾಳಿಗೆ ಬಲಿಯಾಗಿದ್ದಾರೆ. ಉಕ್ರೇನ್‌ನಲ್ಲಿ 27ಮಂದಿ ಸಾವನ್ನಪ್ಪಿದ್ದಾರೆ. ಜರ್ಮನಿ ಮತ್ತು ಆಸ್ಟ್ರೀಯಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ