ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ಗೆ ಶಸ್ತ್ರಾಸ್ತ್ರ ಮಾರಾಟ; ಸಮರ್ಥಿಸಿಕೊಂಡ ಚೀನಾ (China | Pakistan | India | Arms)
Bookmark and Share Feedback Print
 
ಪಾಕಿಸ್ತಾನಕ್ಕೆ ಯುದ್ಧ ಹಡಗುಗಳು ಹಾಗೂ ಜಲಾಂತರ್ಗಾಮಿಗಳನ್ನು ಮಾರಾಟ ಮಾಡಿರುವ ಬೀಜಿಂಗ್ ನಿರ್ಧಾರವನ್ನು ಚೀನಾ ಸಮರ್ಥಿಸಿಕೊಂಡಿದೆ. ಅದಕ್ಕೆ ನೀಡಿರುವ ಕಾರಣ ರಷ್ಯಾ ಮತ್ತು ಅಮೆರಿಕಾಗಳಿಂದ ಭಾರತ ಶಸ್ತ್ರಾಸ್ತ್ರ ಖರೀದಿ ಮಾಡುತ್ತಿದೆ ಎಂಬುದು. ಅಲ್ಲದೆ ಚೀನಾ ಯುದ್ಧ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿರುವ ಕುರಿತು ಭಾರತ ವ್ಯಕ್ತಪಡಿಸುತ್ತಿರುವ ಕಳವಳ ತನ್ನ ಗಮನದಲ್ಲಿದೆ ಎಂದು ಹೇಳಿಕೊಂಡಿದೆ.

ಈ ರೀತಿಯ ನಮ್ಮ ಕ್ರಮದಿಂದ ಅದರ ಪಕ್ಕದ ದೇಶಗಳಲ್ಲಿ ಕಳವಳ ಉಂಟಾಗಬಹುದು. ಆದರೆ ಯಾವುದೇ ಸಂಶಯಗಳು ಅನಗತ್ಯ ಎಂದು ಚೀನಾ ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಶಸ್ತ್ರೀಕರಣ ಅಸೋಸಿಯೇಷನ್ ಉಪ ನಿರ್ದೇಶಕ ಝಾಯ್ ಡೀಕೆನ್ ತಿಳಿಸಿದ್ದಾರೆ.

ಕಳೆದ ಜೂನ್‌ನಲ್ಲಿ ಚೀನಾ ಕಿರು ಯುದ್ಧನೌಕೆ 'ಎಫ್22ಪಿ'ಯಂತಹ ಹಡಗುಗಳನ್ನು ಹಸ್ತಾಂತರಿಸಿದಂತೆ ಇನ್ನೂ ಹೆಚ್ಚಿನ ಕಾರ್ಯಸಾಮರ್ಥ್ಯದ ಯುದ್ಧ ಸಾಮಗ್ರಿಗಳನ್ನು ಬೀಜಿಂಗ್ ಪಾಕಿಸ್ತಾನಕ್ಕೆ ನೀಡಬೇಕು ಎಂದು ಪಾಕ್ ನೌಕಾಪಡೆ ಮುಖ್ಯಸ್ಥ ನಾರ್ಮನ್ ಬಶೀರ್ ಪ್ರಯತ್ನಿಸುತ್ತಿರುವ ಮಧ್ಯೆ ಈ ಹೇಳಿಕೆ ಬಂದಿದೆ.

ಪಾಕಿಸ್ತಾನವು ಉತ್ಕೃಷ್ಟ ಸಾಮರ್ಥ್ಯದ ವ್ಯವಸ್ಥೆಗಳನ್ನು ಹೊಂದುವ ಮೂಲಕ ತನ್ನ ಭದ್ರತೆಗೆ ಹೆಚ್ಚು ಒತ್ತು ಕೊಡುತ್ತಿರುವುದು ಸ್ವತಂತ್ರ ರಾಷ್ಟ್ರವಾಗಿ ಸಾಮಾನ್ಯ ಪ್ರಕ್ರಿಯೆ. ಭಾರತ ಕೂಡ ಇದೇ ರೀತಿಯ ಬೃಹತ್ ಮಿಲಿಟರಿ ವ್ಯವಹಾರಗಳನ್ನು ಅಮೆರಿಕಾ ಮತ್ತು ರಷ್ಯಾಗಳೊಂದಿಗೆ ಮಾಡುತ್ತಿದೆ ಎಂದು ಝಾಯ್ ತಿಳಿಸಿದ್ದಾರೆ.

ಭಾರತದ ವೈಮಾನಿಕ ನೌಕೆಗಳ ವೆಚ್ಚ ಬಹುತೇಕ ಹಲವು ಬಿಲಿಯನ್ ಅಮೆರಿಕನ್ ಡಾಲರುಗಳನ್ನು ಮುಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಚೀನಾ ರಕ್ಷಣಾ ಸಚಿವರನ್ನು ಶುಕ್ರವಾರ ಭೇಟಿ ಮಾಡಿದ ಪಾಕಿಸ್ತಾನದ ನೌಕಾಪಡೆ ಮುಖ್ಯಸ್ಥ, ಪಾಕ್ ಇನ್ನಷ್ಟು ಶಸ್ತ್ರಾಸ್ತ್ರಗಳನ್ನು ಚೀನಾದಿಂದ ಪಡೆಯಲು ಬಯಸುತ್ತಿದೆ. ಬೃಹತ್ ಯುದ್ಧನೌಕೆಗಳು, ಜೆಎಫ್-17 ಯುದ್ಧ ವಿಮಾನಗಳು, ಜಲಂತರ್ಗಾಮಿಗಳು ನಮ್ಮ ಈಗಿನ ಅಗತ್ಯಗಳು ಎಂದು ಹೇಳಿದ್ದರು.
ಸಂಬಂಧಿತ ಮಾಹಿತಿ ಹುಡುಕಿ