ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಯುದ್ಧ ನಿರಾಶ್ರಿತ ತಮಿಳರಿಗೆ ಲಂಕಾದಲ್ಲಿ ಮತದಾನ ಹಕ್ಕಿಲ್ಲ..! (Tamil | Sri Lanka | War refugees | Tamil Tiger rebels)
Bookmark and Share Feedback Print
 
ತಮಿಳು ಬಂಡುಕೋರರ ವಿರುದ್ಧ ವಿಜಯ ಸಾಧಿಸಿದ ಬಳಿಕ ನಡೆಯುತ್ತಿರುವ ಮೊತ್ತ ಮೊದಲ ಶ್ರೀಲಂಕಾ ರಾಷ್ಟ್ರೀಯ ಚುನಾವಣೆಯಲ್ಲಿ ಯುದ್ಧ ನಿರಾಶ್ರಿತರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶ ಪಡೆಯುವ ಸಾಧ್ಯತೆ ಕಡಿಮೆ ಎಂದು ಚುನಾವಣಾ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

ಬೌದ್ಧ ಸಿಂಹಳೀಯರ ಪ್ರಾಬಲ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ನಲುಗುತ್ತಿರುವ ಹಿಂದೂ ತಮಿಳು ಅಲ್ಪಸಂಖ್ಯಾತರಿಗೆ ಮತದಾನ ಅವಕಾಶವಿಲ್ಲದೇ ಇರುವುದು ಮತ್ತಷ್ಟು ಅಸಮಾಧಾನಗಳಿಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.

ಯುದ್ಧ ನಿರಾಶ್ರಿತ ಶಿಬಿರಗಳಲ್ಲಿ ನೆಲೆ ಕಂಡುಕೊಂಡಿರುವ ಸುಮಾರು 3,00,000 ಜನರಲ್ಲಿ ಬಹುತೇಕ ತಮಿಳರೇ ಆಗಿದ್ದು, ಜನವರಿ 26ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಮತದಾನ ಅವಕಾಶ ಪಡೆದಿಲ್ಲ.

ಇದಕ್ಕೆ ಸ್ವತಂತ್ರ ಚುನಾವಣಾ ವೀಕ್ಷಕರು ನೀಡಿರುವ ಕಾರಣ ಆಡಳಿತದ ವೈಫಲ್ಯ. ಅಗತ್ಯ ಕ್ರಮಗಳ ಮೂಲಕ ಶಿಬಿರಗಳಲ್ಲಿನ ಮತದಾರರನ್ನು ನೋಂದಾವಣಿ ಮಾಡಿಕೊಂಡಿಲ್ಲ ಎಂದು ಅದು ಒತ್ತಿ ಹೇಳಿದೆ.

ಮತದಾನ ವ್ಯವಸ್ಥೆಯು ಸಮರ್ಥ ತಾಂತ್ರಿಕತೆಯನ್ನು ಅಳವಡಿಸಿಕೊಂಡಿರದ ಕಾರಣ ಆಂತರಿಕ ಬಂಧನದಲ್ಲಿರುವ ಸರಿಸುಮಾರು ಶೇ.95ರಷ್ಟು ಮಂದಿ ತಮ್ಮ ಹಕ್ಕನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಚಲಾಯಿಸುವುದು ಕಷ್ಟ ಸಾಧ್ಯ ಎಂದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣಾ ಪ್ರಚಾರ ಸಂಘಟನೆಯ ಸದಸ್ಯರಲ್ಲೊಬ್ಬರಾದ ಕೀರ್ತಿ ತೆನ್ನಕೂನ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಚುನಾವಣೆಗೂ ಮೊದಲು ಚುನಾವಣಾ ಆಯುಕ್ತರು ತಪ್ಪುಗಳನ್ನು ತಿದ್ದಿಕೊಳ್ಳಲು ಯತ್ನಿಸಿದಲ್ಲಿ ಅದು ಸಾಧ್ಯವಿದೆ. ನಿರಾಶ್ರಿತರಿಗೂ ಮತದಾನದ ಹಕ್ಕನ್ನು ನೀಡುವ ಅವಕಾಶಗಳಿವೆ ಎಂದು ಅವರು ತಿಳಿಸಿದ್ದಾರೆ.

ಜನವರಿ 26ರಂದು ನಡೆಯಲಿರುವ ರಾಷ್ಟ್ರೀಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಸಕ್ತ ಅಧ್ಯಕ್ಷ ಮಹೀಂದ್ರಾ ರಾಜಪಕ್ಷೆ ಮತ್ತು ಮಿಲಿಟರಿ ಮಾಜಿ ಮುಖ್ಯಸ್ಥ ಶರತ್ ಫೊನ್ಸೇಕಾ ಅಭ್ಯರ್ಥಿಗಳು.
ಸಂಬಂಧಿತ ಮಾಹಿತಿ ಹುಡುಕಿ