ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಶ್ವದ ಅತ್ಯಂತ ಕಡಿಮೆ ಅಪರಾಧದ ದೇಶ ಕತಾರ್ (Qatar | crime rate | world | Dubai | Al Faza)
Bookmark and Share Feedback Print
 
ವಿಶ್ವದಲ್ಲಿ ಅತ್ಯಂತ ಕಡಿಮೆ ಅಪರಾಧ ನಡೆಯುವ ದೇಶಗಳ ಪಟ್ಟಿಯಲ್ಲಿ ಕತಾರ್ ಸ್ಥಾನ ಪಡೆದಿದೆ. ಇಲ್ಲಿ ಹತ್ತು ಲಕ್ಷ ಜನರ ಪೈಕಿ ಕೇವಲ ಶೇ.0.5ರಷ್ಟು ಮಂದಿ ಅಪರಾಧ ಪ್ರಕರಣಗಳಿಗೆ ತುತ್ತಾಗುತ್ತಿದ್ದಾರೆ ಎಂದು ಕತಾರ್ ಜನರಲ್ ಸೆಕ್ರೆಟೆರಿಯೇಟ್ ಆಫ್ ಸ್ಟೇಟ್ ಕ್ಯಾಬಿನೆಟ್ ಬಿಡುಗಡೆ ಮಾಡಿರುವ ಅಂಕಿ-ಅಂಶದಲ್ಲಿ ತಿಳಿಸಿದೆ.

ವಿಶ್ವದಲ್ಲಿ ಹತ್ತು ಲಕ್ಷ ಜನರ ಪೈಕಿ 8ಮಂದಿ ಅಪರಾಧಗಳಿಗೆ ಈಡಾಗುತ್ತಿದ್ದಾರೆ. ಅಲ್ಲದೇ ಕತಾರ್‌ನಲ್ಲಿ ಶೇ.25ರಷ್ಟು ಮಾತ್ರ ಕಳ್ಳತನದಂತಹ ಪ್ರಕರಣಗಳು ನಡೆಯುತ್ತವೆ. ಅದೇ ರೀತಿ ಕತಾರ್‌ನಲ್ಲಿ ಅಪಹರಣ, ದಾಳಿ ಹಾಗೂ ಬೆಂಕಿ ಹಚ್ಚುವಂತಹ ಪ್ರಕರಣಗಳ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆ ಪ್ರಮಾಣದಲ್ಲಿದೆ.

ಅಪರಾಧ ತಡೆಯುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಕತಾರ್‌ನಲ್ಲಿ ವಿಶೇಷ ರಕ್ಷಣಾ ಪಡೆಯನ್ನು ರಚಿಸಿತ್ತು. ಅಲ್ ಫಜಾ ಹೆಸರಿನ ಈ ಪಡೆ 24ಗಂಟೆಗಳ ಕಾಲ ರಸ್ತೆ ಮತ್ತು ನಿವಾಸಗಳ ಸುತ್ತಮುತ್ತ ಪಹರೆ ಕಾಯುತ್ತವೆ.
ಸಂಬಂಧಿತ ಮಾಹಿತಿ ಹುಡುಕಿ