ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಪಹೃತ ಕೊಲಂಬಿಯಾ ರಾಜ್ಯಪಾಲರ ಹತ್ಯೆ (Florencia | Colombia | Abduction | Luis Francisco | leftist rebels)
Bookmark and Share Feedback Print
 
ಮಾವೋವಾದಿ ಬಂಡಕೋರರಿಂದ ಅಪಹರಿಲ್ಪಟ್ಟ ದಕ್ಷಿಣ ಕೊಲಂಬಿಯಾದ ರಾಜ್ಯಪಾಲರನ್ನು 24ಗಂಟೆಯೊಳಗೆ ಅವರನ್ನು ಹತ್ಯೆಗೈದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

2002ರಲ್ಲಿ ರಾಜಕೀಯ ಮುಖಂಡರೊಬ್ಬರನ್ನು ಅಪಹರಿಸಿದ ನಂತರದ ಮೊದಲ ಪ್ರಕರಣ ಇದಾಗಿದೆ. 69ರ ಹರೆಯದ ರಾಜ್ಯಪಾಲ ಲೂಯಿಸ್ ಫ್ರಾನ್ಸಿಸ್ಕೋ ಕ್ಯುಲ್ಲಾರ್ ಅವರನ್ನು ಸೋಮವಾರ ತಡರಾತ್ರಿ ರಾಜಧಾನಿಯಿಂದ ಮಾವೋ ಬಂಡುಕೋರರು ಅಪಹರಿಸಿದ್ದರು ಎಂದು ರಕ್ಷಣಾ ಅಧಿಕಾರಿ ಎಡಿಬೆರೊಟೊ ರಮೋನ್ ಎನ್‌ಡೋ ವಿವರಿಸಿದ್ದಾರೆ.

ಅಪಹರಣಗೊಂಡ ರಾಜ್ಯಪಾಲರ ಮೃತದೇಹ ಫ್ಲೋರೆನ್ಸಿಯಾ ಬಳಿ ಪತ್ತೆಯಾಗಿರುವುದಾಗಿ ರಾಜ್ಯಪಾಲರ ಪತ್ನಿ ಹಿಮೆಲ್ಡೋ ಗಾಲಿನ್‌ಡೋ ಖಚಿತಪಡಿಸಿದ್ದಾರೆ. ಆದರೆ ಅಪಹರಣಕಾರರು ಇಟ್ಟಿರುವ ಬೇಡಿಕೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಸೋಮವಾರ ತಡರಾತ್ರಿ ಸುಮಾರು ಹತ್ತು ಮಂದಿ ಮಿಲಿಟರಿ ಸಮವಸ್ತ್ರದಲ್ಲಿ ರಾಜ್ಯಪಾಲರ ಮನೆಗೆ ಆಗಮಿಸಿ ಅವರನ್ನು ಅಪಹರಿಸಲಾಗಿತ್ತು.

ರಾಜ್ಯಪಾಲರ ಮನೆಯ ಭದ್ರತಾ ಪಡೆಯ ಪೊಲೀಸ್ ಒಬ್ಬನನ್ನು ಹತ್ಯೆಗೈದು, ಬಾಗಿಲನ್ನು ಸ್ಫೋಟಕದಿಂದ ಸ್ಫೋಟಿಸಿ ರಾಜ್ಯಪಾಲರ ಮನೆಗೆ ನುಗ್ಗಿರುವುದಾಗಿ ಪೊಲೀಸ್ ವರಿಷ್ಠ ಜ.ಓರ್ಲಾಂಡೋ ಪೆಯ್ಜ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ