ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾನ್‌ನಲ್ಲಿ ಒಸಾಮಾ ಬಿನ್ ಲಾಡೆನ್ ಕುಟುಂಬ ಪತ್ತೆ (Osama bin Laden | family | United States | Iran | Afghan)
Bookmark and Share Feedback Print
 
ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಅಲ್‌ಕೈದಾ ಮುಖ್ಯಸ್ಥ ಒಸಮಾ ಬಿನ್ ಲಾಡೆನ್‌ನ ಹತ್ತಿರದ ಸಂಬಂಧಿಗಳು ಇರಾನ್‌ನಲ್ಲಿ ರಹಸ್ಯ ರೀತಿಯಲ್ಲಿ ಬದುಕುತ್ತಿರುವುದಾಗಿ ಮೂಲಗಳು ಬಹಿರಂಗಪಡಿಸಿವೆ.

ಅಮೆರಿಕದಲ್ಲಿ ನಡೆದ ಸೆಪ್ಟೆಂಬರ್ ದಾಳಿಯ ನಂತರ ಅಫ್ಘಾನಿಸ್ತಾನದ ಮೇಲೆ ಅಮೆರಿಕದ ನ್ಯಾಟೋ ಪಡೆಗಳು ಪ್ರತಿದಾಳಿ ನಡೆಸಿದಾಗ ಶಿಬಿರದಿಂದ ಕಾಣೆಯಾಗಿದ್ದ ಒಸಾಮಾ ಪತ್ನಿ ಮತ್ತು ಮಕ್ಕಳು ಪತ್ತೆಯಾಗಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಒಸಾಮಾ ಕುಟುಂಬ ಅಡಗಿದ್ದಾರೆ ಎನ್ನುವ ಬಗ್ಗೆ ಅನಿಶ್ಚಿತತೆ ಎದುರಾಗಿತ್ತು. ಕೆಲ ಮೂಲಗಳ ಪ್ರಕಾರ ಬಾಂಬ್‌ ದಾಳಿಯಲ್ಲಿ ಒಸಾಮಾ ಮಕ್ಕಳು ಹತ್ಯೆಯಾಗಿದ್ದಾರೆ. ಇತರರು ತಂದೆಯ ಜೊತೆಯಲ್ಲಿ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗಿತ್ತು. ಏತನ್ಮಧ್ಯೆ ಒಸಾಮಾ ಪತ್ನಿಯರು ಹಾಗೂ ಆರು ಮಕ್ಕಳು ಹಾಗೂ 11 ಮೊಮ್ಮಕ್ಕಳು ಟೆಹರಾನ್‌ನಿಂದ ಹೊರವಲಯದಲ್ಲಿ ಭಾರಿ ಬಿಗಿ ಭಧ್ರತೆಯಲ್ಲಿರಿಸಲಾಗಿದೆ ಎಂದು ಒಸಾಮಾ ಸಂಬಂಧಿಕರು ತಿಳಿಸಿದ್ದಾರೆ.

ಒಸಾಮಾ ಕುಟುಂಬದವರು ಹೊರಜಗತ್ತಿಗೆ ಸಂಪರ್ಕಿಸದಂತೆ ತಡೆಯಲಾಗಿದ್ದು,ಒಸಾಮಾ ಸಂಬಂಧಿಕರು ಇರಾನ್‌‌ನಲ್ಲಿದ್ದಾರೆ ಎನ್ನುವ ವರದಿಗಳನ್ನು ಸರಕಾರ ನಿರಂತರ ತಳ್ಳಿಹಾಕುತ್ತಿತ್ತು.

ಒಸಾಮಾ ಬಿನ್ ಲಾಡೆನ್ ಕುಟುಂಬ, ಇದೀಗ ಇರಾನ್‌ನಿಂದ ತೆರಳಲು ಅನುಮತಿ ನೀಡಿ, ಅಮೆರಿಕದಲ್ಲಿ ನಡೆದ ಸೆಪ್ಟೆಂಬರ್‌ ದಾಳಿಯಲ್ಲಿ ಮರೆತು ಹೋದ ಬಲಿಪಶುಗಳು ಎನ್ನುವಂತೆ ತಮ್ಮನ್ನು ಪರಿಗಣಿಸಬೇಕು ಎಂದು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಅಲ್‌-ಕೈದಾ ನಾಯಕ ಒಸಾಮಾ ಬಿನ್ ಲಾಡೆನ್‌ನ ನಾಲ್ಕನೇ ಪುತ್ರನಾದ 29 ವರ್ಷ ವಯಸ್ಸಿನ ಒಮರ್ ಒಸಾಮಾ ಮಾತನಾಡಿ, ನವೆಂಬರ್ ತಿಂಗಳ ನಂತರ ಸಹೋದರ ಸಹೋದರಿಯರು ಬದುಕಿದ್ದಾರೆ ಅಥವಾ ಇಲ್ಲ ಎನ್ನುವುದು ನನಗೆ ತಿಳಿದಿಲ್ಲ. ಅಮೆರಿಕದಲ್ಲಿ ನಡೆದ ಉಗ್ರರ ದಾಳಿಗೆ ಮುನ್ನ ಅಫ್ಘಾನಿಸ್ತಾನದಿಂದ ತಾವು ಇರಾನ್‌ ಗಡಿಯನ್ನು ತಲುಪಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರನ್ನು ಭಧ್ರತಾ ಪಡೆಗಳು ಸುರಕ್ಷತೆಯ ದಷ್ಟಿಯಿಂದಾಗಿ ಟೆಹರಾನ್‌‌ನಿಂದ ಹೊರಗೆ ತೆರಳಲು ಅನುಮತಿ ನೀಡುತ್ತಿಲ್ಲ. ಸಹೋದರರಾದ ಸಾದ್,ಒಸ್ಸಾಮಾನ್ ಮುಹಾಮ್ಮದ್, ಫಾತ್ಮಾ ಹಮ್ಜಾ ,ಇಮಾನ್ ಮತ್ತು ಬಕ್ರ್ ಕುಟುಂಬದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ