ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪುರಾವೆ ಇಲ್ಲದೆ ಸಯೀದ್ ಬಂಧನವಿಲ್ಲ: ಪಾಕಿಸ್ತಾನ (Hafiz Saeed | Rehman Malik | Islamabad | Jamaat-ud-Dawah)
Bookmark and Share Feedback Print
 
ಜಮಾತ್ ಉದ್ ದವಾ ವರಿಷ್ಠ ಹಫೀಜ್ ಮೊಹಮ್ಮದ್ ಸಯೀದ್ ವಿರುದ್ಧ ಪಾಕಿಸ್ತಾನ ತನಿಖೆ ನಡೆಸುತ್ತಿದೆ. ಆದರೆ ಸಯೀದ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ಲಭಿಸುವವರೆಗೆ ಬಂಧಿಸಲು ಸಾಧ್ಯವಿಲ್ಲ ಎಂದು ಪಾಕ್ ಆಂತರಿಕ ಸಚಿವ ರೆಹಮಾನ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

'ನಾವು ಸಯೀದ್‌ನನ್ನು ಬಂಧಿಸಲು ಸಾಧ್ಯವಿಲ್ಲ, ಆತನ ವಿರುದ್ಧ ಸಾಕ್ಷ್ಯ ದೊರೆಯುವರೆಗೆ ಅದು ಸಾಧ್ಯವಿಲ್ಲ. ಆದರೆ ಆತನ ಬಗ್ಗೆ ತೆಗೆದುಕೊಳ್ಳುವ ಕ್ರಮದ ಬಗ್ಗೆ ನಾನೇನು ಹೇಳಲಾರೆ. ಸಯೀದ್ ಕುರಿತ ವಿಚಾರಣೆ ಮುಂದುವರಿದಿದೆ ಎಂದು ಇಸ್ಲಾಮಾಬಾದ್ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದರು.

ಸಯೀದ್ ವಿರುದ್ಧದ ತನಿಖೆ ಮುಂದುವರಿಯುತ್ತಿದೆ. ಆತನ ಬಗ್ಗೆ ಏನಾದರೂ ಸ್ವಲ್ಪ ಪುರಾವೆ ಸಿಕ್ಕರೂ, ನಾವು ಯಾವುದೇ ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಹೇಳಿದರು.

ಮುಂಬೈ ದಾಳಿಯಲ್ಲಿ ಭಾಗಿ ಆಗಿರುವ ಹಫೀಜ್ ಸಯೀದ್‌ನನ್ನು ಕೂಡಲೇ ಬಂಧಿಸಬೇಕೆಂಬ ಭಾರತದ ಬೇಡಿಕೆ ಕುರಿತಂತೆ ಸುದ್ದಿಗಾರರು ಪ್ರಶ್ನಿಸಿದಾಗ ಈ ರೀತಿಯಾಗಿ ಪ್ರತಿಕ್ರಿಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ