ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 'ಜಾರ್ಜ್' ವಿಶ್ವದ ಅತೀ ದೊಡ್ಡ ನಾಯಿ! (Pets | Dog | George)
Bookmark and Share Feedback Print
 
ಜಾರ್ಜ್ ಈ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾನೆ. ಈ ಜಾರ್ಜ್ ಯಾರು ಎಂಬ ಪ್ರಶ್ನೆಗೆ ಸ್ವತಃ ಆತನಿಗೇ ತನ್ನ ಬಗ್ಗೆ ವಿವರಿಸಲು ಸಾಧ್ಯವಿಲ್ಲ. ಆದರೆ ಈತ ಗಿನ್ನಿಸ್ ದಾಖಲೆ ಮಾಡಲು ಹೊರಟಿರುವುದಂತೂ ಸತ್ಯ. ಹಾಗಾದರೆ ಈ ಜಾರ್ಜ್ ಯಾರು ಎಂಬ ಪ್ರಶ್ನೆ ಸಹಜ. ಉತ್ತರ ಸರಳ. ಜಾರ್ಜ್ ಇನ್ಯಾರೂ ಅಲ್ಲ. ಸಾಕ್ಷಾತ್ ನಾಯಿ! ಈ ನಾಯಿಯ ಸಾಧನೆ ಏನಪ್ಪಾ ಅಂದರೆ ಇದು ವಿಶ್ವದ ಅತೀ ದೊಡ್ಡ 'ಬೃಹತ್ ನಾಯಿ'.

ಜಾರ್ಜ್ ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಉದ್ದದ ನಾಯಿ ಎಂದು ದಾಖಲೆ ಬರೆಯಲು ಸಜ್ಜಾಗಿದ್ದಾನೆ. ಈ ಜಾರ್ಜ್ ಬ್ಲೂ ಗ್ರೇಟ್ ಡೇನ್ ಜಾತಿಗೆ ಸೇರಿದ ನಾಯಿಯಾಗಿದ್ದು ಥಟ್ಟನೆ ನೋಡಿದರೆ ಕುದುರೆಯಂತೆ ಕಾಣುತ್ತದೆ. ಸೋಫಾದಲ್ಲಿ ಕೂತರೆ ನೆಲದಲ್ಲಿ ನಿಂತ ವ್ಯಕ್ತಿಗಿಂತ ಎತ್ತರವಾಗಿ ಕಾಣುತ್ತದೆ. ಕಪ್ಪುಬಣ್ಣದ ಈ ನಾಯಿಯ ಮೂಗಿನಿಂದ ಬಾಲದವರೆಗೆ ಏಳು ಅಡಿ ಮೂರು ಇಂಚು ಉದ್ದವಿದೆ!

ಈ ಜಾರ್ಜ್ ನಿಜಕ್ಕೂ ತನ್ನ ಮಾಲಿಕರ ಜೊತೆಗೆ ಅರಸನಂತೆ ಸಂತೃಪ್ತ ಜೀವನ ನಡೆಸುತ್ತಿದ್ದಾನೆ. ತಿಂಗಳಿಗೆ 110 ಪೌಂಡ್ ಆಹಾರವನ್ನು ಗಡದ್ದಾಗಿ ತಿನ್ನುವ ಈ ಜಾರ್ಜ್‌ಗೆ ಈಗ ನಾಲ್ಕು ವರ್ಷ. ಈ ಜಾರ್ಜ್‌ಗೆ ಈಗಾಗಲೇ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಟ್ವಿಟರ್, ಫೇಸ್‌ಬುಕ್‌ಗಳಲ್ಲೂ ಈ ನಾಯಿಗೆ ಸಾಕಷ್ಟು ಅಭಿಮಾನಿಗಳಿದ್ದಾರಂತೆ!
ಸಂಬಂಧಿತ ಮಾಹಿತಿ ಹುಡುಕಿ