ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ಗೆ ಐಎಂಎಫ್‌ನಿಂದ 1.2ಬಿನ್.ಡಾಲರ್ ಸಹಾಯ ಧನ (Pakistan | IMF | Aid)
Bookmark and Share Feedback Print
 
ಆರ್ಥಿಕ ಕುಸಿತವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ 1.2 ಬಿಲಿಯನ್ ಡಾಲರ್‌ಗಳ ಸಹಾಯ ಧನವನ್ನು ಘೋಷಿಸಿದೆ

ಕಳೆದ ಹಲವು ವರ್ಷಗಳಿಂದ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ, ಆರ್ಥಿಕ ಸಹಾಯದ ಅಗತ್ಯವಿದೆ ಎಂದು ಐಎಂಎಫ್‌ನ ವಿದೇಶಾಂಗ ವ್ಯವಹಾರಗಳ ನಿರ್ದೇಶಕ ಕಾರ್ಲೈನ್ ಅಟ್‌ಕಿನ್ಸನ್‌ ತಿಳಿಸಿದ್ದಾರೆ.

ಎಎಂಎಫ್‌ನ ಸಹಾಯ ಧನವನ್ನು ಶುಕ್ರವಾರದೊಳಗೆ, ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಸಂಗ್ರಹಕ್ಕೆ ಠೇವಣಿ ಮಾಡಲಾಗುವುದು ಎಂದು ವಾಷಿಂಗ್ಟನ್‌ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿಯ ಅಧಿಕಾರಿಗಳು ಹೇಳಿದ್ದಾರೆ.

ಪ್ರಸ್ತುತ ಆರ್ಥಿಕ ವರ್ಷದ ಮುಕ್ತಾಯಕ್ಕೆ ಜಿಡಿಪಿ ದರವನ್ನು ಶೇ.4.9ಕ್ಕೆ ತರುವಂತೆ ಯೋಜನೆಯನ್ನು, ಪಾಕಿಸ್ತಾನ ರೂಪಿಸುವುದು ಅಗತ್ಯವಾಗಿದೆ ಎಂದು ಐಎಂಎಫ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಐಎಂಎಫ್, ಸಹಾಯಧನ