ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ನಿಷೇಧಕ್ಕೆ ಬಾರೀ ವಿರೋಧ! (Burqas | France | UMP | Islam)
Bookmark and Share Feedback Print
 
PTI
ಫ್ರಾನ್ಸ್ ಸರ್ಕಾರ ಶೀಘ್ರದಲ್ಲೇ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಬುರ್ಖಾ ತೊಡುವುದನ್ನು ನಿಷಿದ್ಧಗೊಳಿಸಲು ಚಿಂತಿಸಿದೆ. ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಝಿ ಶೀಘ್ರದಲ್ಲೇ ಈ ಮಸೂದೆಯನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ. ಸಂಸತ್ತಿನಲ್ಲಿ ಈ ಮಸೂದೆ ಅಂಗೀಕಾರವಾಗುವವರೆಗೂ ಕಾಯದೆ, ಜಾರಿಗೆ ಬರಲು ಹೊರಟಿರುವುದು ಈಗ ಫ್ರಾನ್ಸಿನ ಅಲ್ಪಸಂಖ್ಯಾತರನ್ನು ರೊಚ್ಚಿಗೆಬ್ಬಿಸಿದೆ.

ಈ ಹಿಂದೆಯೇ ಯುಎಂಪಿ ಮುಸ್ಲಿಂ ಮಹಿಳೆಯರು ಬುರ್ಖಾ ಧರಿಸುವುದನ್ನು ಎಲ್ಲಾ ಕಚೇರಿ ಕಟ್ಟಡಗಳಲ್ಲಿ ನಿಷೇಧಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ಆಗ ಮುಸ್ಲಿಂ ಸಮುದಾಯ ತಮ್ಮನ್ನು ಫ್ರಾನ್ಸ್ ಸರ್ಕಾರ ಹೊರಗಿನವರಂತೆ ಕಾಣುತ್ತಿದೆ. ಸಂಪೂರ್ಣ ಫ್ರಾನ್ಸ್ ದೇಶೀಯರೆಂದು ನಮ್ಮನ್ನು ಪರಿಗಣಿಸುತ್ತಿಲ್ಲ ಹಾಗೂ ಹೊರಗಿಡಲಾಗುತ್ತಿದೆ ಎಂದು ಆರೋಪಿಸಿತ್ತು.

ಆದರೂ, ಯುಎಂಪಿ ಪಕ್ಷದ ಮುಖಂಡ ಜೀನ್ ಫ್ರಾಂಕೋಯಿಸ್ ಕೋಪ್ ಮಾತನಾಡುತ್ತಾ, ಒಬ್ಬ ವ್ಯಕ್ತಿ ತನ್ನ ಮುಖವನ್ನು ಪರದೆಯಿಂದ ಮುಚ್ಚಿಕೊಳ್ಳುವ ಸಂಪ್ರದಾಯ ಆ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನೇ ಹರಣ ಮಾಡಿದಂತೆ ಎಂದು ವ್ಯಾಖ್ಯಾನಿಸಿದ್ದಾರೆ.

ಈ ಮಸೂದೆಯಲ್ಲಿ, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಮುಖವನ್ನು ಪೂರ್ತಿಯಾಗಿ ಮುಚ್ಚುವ ಬುರ್ಖಾಗಳನ್ನು ಧರಿಸಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕ ನಿಯಮಗಳನ್ನು ಪಾಲಿಸಬೇಕು. ಧಾರ್ಮಿಕ ಕಟ್ಟಳೆಗಳನ್ನಲ್ಲ ಎಂದಿದೆ. ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಮುಸ್ಲಿಂ ಹುಡುಗಿಯರು ಧರಿಸುವ ಸ್ಕಾರ್ಫ್‌ಗಳನ್ನೂ ನಿಷೇಧಿಸಲಾಗಿದೆ.

ಮುಂದಿನ ಜನವರಿ ತಿಂಗಳಲ್ಲಿ ಬುರ್ಖಾ ನಿಷೇಧ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಮತ ಚಲಾವಣೆ ನಡೆಯಲಿದ್ದು, ಆಗ ಈ ಬಗ್ಗೆ ವಾದವಿವಾದಗಳು ನಡೆಯಲಿವೆ. ಆದರೆ ಫ್ರಾನ್ಸ್‌ನ ಅಧ್ಯಕ್ಷರು ಮಾತ್ರ ಪೂರ್ತಿಯಾಗಿ ಮುಚ್ಚುವ ಬುರ್ಖಾ ಧರಿಸುವುದು ಫ್ರೆಂಚರ ನಿಯಮಗಳಿಗೆ ಗೌರವ ನೀಡದೆ ಇದ್ದಂತೆ ಎಂದು ವ್ಯಾಖ್ಯಾನಿಸಿದ್ದಾರೆ. ಯುಎಂಪಿಯ ಸದಸ್ಯರಾ ಬರ್ನಾರ್ಡ್ ಅಕೋಯರ್ ಈ ಬಗ್ಗೆ ಪ್ರತಿಕ್ರಿಯಿಸಿ, ಈಬ ಈ ಬಗ್ಗೆ ಮಾತನಾಡುವುದು ತುಂಬಾ ಅವಸರವೆನಿಸುತ್ತದೆ. ಆದರೆ ಸಾರ್ವಜನಿಕ ಚರ್ಚೆಯ ವಿಚಾರವಾದ ಇಂಥ ವಿಷಯಗಳನ್ನು ಜಾರಿಗೆ ತರುವ ಸಂದರ್ಭ ಜನರ ಮೂಲಭೂತ ಹಕ್ಕುಗಳಿಗೂ ಗೌರವ ನೀಡಬೇಕಾಗುತ್ತದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ