ಇಸ್ಲಾಮಾಬಾದ್ , ಗುರುವಾರ, 24 ಡಿಸೆಂಬರ್ 2009( 13:36 IST )
ಪಾಕಿಸ್ತಾನದ ಪೇಶಾವರ್‌ನಲ್ಲಿ ನಡೆದ ಆತ್ಮಾಹುತಿ ಬಾಂಬರ್ ದಾಳಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೇಶಾವರ್‌ನ ಸದ್ದಾರ್‌ನ ಮಾಲ್‌ರೋಡ್‌ನಲ್ಲಿರುವ ಸ್ಟೇಟ್ ಲೈಫ್ ಬಿಲ್ಡಿಂಗ್ ಹತ್ತಿರ, ಆತ್ಮಾಹುತಿ ದಾಳಿ ನಡೆದಿದೆ ಎಂದು ಟೆಲಿವಿಜನ್ ಚಾನೆಲ್‌ಗಳು ತಿಳಿಸಿವೆ.
ಉಗ್ರರ ದಾಳಿಯ ಕುರಿತಂತೆ ಹಿರಿಯ ಸಚಿವ ಬಷೀರ್ ಬಿಲೌರ್ ಖಚಿತಪಡಿಸಿದ್ದು, ಗಾಯಾಳುಗಳನ್ನು ಹತ್ತಿರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಆತ್ಮಾಹುತಿ ಬಾಂಬ್‌ಸ್ಫೋಟ ನಡೆದ ಸ್ಥಳದಲ್ಲಿ, ಬ್ಯಾಂಕ್‌ಗಳು, ಶಾಲೆಗಳು,ಚರ್ಚ್‌ಗಳು ಹಾಗೂ ಸೇನಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಸ್ಫೋಟ ನಡೆದ ಸ್ಥಳದಲ್ಲಿ ಎರಡು ಸೇನೆ ಚೆಕ್‌ಪೋಸ್ಟ್‌ಗಳಿದ್ದರೂ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.