ನಮ್ಮ ರಾಜಕಾರಣಿಗಳು ಗ್ರಾಮ ವಾಸ್ತವ್ಯದ ಮೂಲಕ ಹವಾ ಸೃಷ್ಟಿಸಿದಂತೆ ಇದೀಗ ಬ್ರಿಟನ್ ರಾಜಕುಮಾರ ಸುದ್ದಿ ಮಾಡಿದ್ದಾರೆ. ಬ್ರಿಟನ್ ರಾಜಕುಮಾರ ವಿಲಿಯಂ ಸುರಿವ ಹಿಮದ ನಡುವೆ ಲಂಡನ್ ಬೀದಿಯಲ್ಲಿ ಮಲಗಿ ರಾತ್ರಿ ಕಳೆದಿದ್ದಾರೆ.
27 ವರ್ಷದ ರಾಜಕುಮಾರ ಚಳಿಯಿಂದ ರಕ್ಷಣೆ ನೀಡುವ ಪ್ಯಾಂಟು ಅಂಗಿ ಧರಿಸಿ ಬೀದಿಯಲ್ಲಿ ಮಲಗಿರುವ ಛಾಯಾಚಿತ್ರವೀಗ ಬೆಳಕಿಗೆ ಬಂದಿದೆ. ಸಂಘಟನೆಯೊಂದು ಮಾಧ್ಯಮಗಳಿಗೆ ಈ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದೆ. ವಸತಿಯಿಲ್ಲದ ಬಡವರ್ಗದ ಜನತೆಯ ಪರ ದನಿ ಎತ್ತುವ ಉದ್ದೇಶದಿಂದ ರಾಜಕುಮಾರ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಒಟ್ಟಾರೆ ಈ ಮೂಲಕ ಬ್ರಿಟನ್ ರಾಜಕುಮಾರ ಸುದ್ದಿಯಾಗಿದ್ದಾರೆ ಹಾಗೂ ಸುದ್ದಿ ಮಾಡಿದ್ದಾರೆ ಎಂಬುದಂತೂ ನಿಜ.