ಯೆಮೆನ್‌ನಲ್ಲಿ ಉಗ್ರಗಾಮಿ ಬಣಗಳು ಬಳಸುತ್ತಿದ್ದ ಪ್ರದೇಶದ ಮೇಲೆ ಗುರುವಾರ ಯೆಮೆನ್ ಸೇನೆ ದಾಳಿ ನಡೆಸಿದ ಪರಿಣಾಮವಾಗಿ 34 ಮಂದಿ ಶಂಕಿತ ಅಲ್ ಖಾಯಿದಾ ಉಗ್ರರು ಬಲಿಯಾಗಿದ್ದಾರೆ.
ಯೆಮೆನ್ ರಾಜಧಾನಿ ಸನಾದಿಂದ ಸುಮಾರು 650 ಕಿ.ಮೀ. ದೂರದಲ್ಲಿರುವ ವಾದಿ ರದಾಫ್ ಎಂಬಲ್ಲಿ ಅನೇಕ ಅಲ್ ಖಾಯಿದಾ ಸದಸ್ಯರು ಸಭೆ ಸೇರುತ್ತಿದ್ದಾರೆಂಬ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿತ್ತು.
ಅರೆಬಿಕ್ ಪ್ರದೇಶದ ಅಲ್ ಖಾಯಿದಾ ಮುಖ್ಯಸ್ಥ ನಾಸಿರ್ ಅಲ್-ವಾಯ್ಚಿ ಕೂಡ ಸಭೆಯಲ್ಲಿ ಹಾಜರಿದ್ದು, ಆತನಿಗೇನಾಗಿದೆ ಎಂಬುದು ದೃಢಪಟ್ಟಿಲ್ಲ. ಆದರೆ, ದಾಳಿಯಲ್ಲಿ ಸೌದಿ ಮತ್ತು ಇರಾನಿನ ಖಾಯಿದಾ ಸದಸ್ಯರೂ ಸತ್ತಿದ್ದಾರೆ ಎಂದು ಮೂಲಗಳು ಹೇಳಿವೆ.