ವಾಷಿಂಗ್ಟನ್, ಗುರುವಾರ, 24 ಡಿಸೆಂಬರ್ 2009( 20:41 IST )
ಅಧ್ಯಕ್ಷ ಬರಾಕ್ ಒಬಾಮ ಅವರ ಆರೋಗ್ಯ ರಕ್ಷಣಾ ನೀತಿಗೆ ಅಮೆರಿಕ ಸೆನೆಟ್ ಗುರುವಾರ ಅಂಗೀಕಾರ ನೀಡಿದ್ದು, ಇದರೊಂದಿಗೆ ವೈದ್ಯಕೀಯ ವಿಮಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಗಳಾಗಲಿದೆ ಮತ್ತು ಇದು ಇನ್ನೂ ವಿಮಾ ರಕ್ಷಣೆ ಪಡೆಯದ ಲಕ್ಷಗಟ್ಟಲೆ ಮಂದಿ ಅಮೆರಿಕನ್ನರನ್ನು ವ್ಯಾಪಿಸುತ್ತದೆ.
ನಾಲ್ಕು ದಶಕಗಳ ಆರೋಗ್ಯ ನೀತಿಯಲ್ಲಿ ಭಾರೀ ಬದಲಾವಣೆ ತರುವ ಈ ಮಸೂದೆಗೆ ಹೆಚ್ಚಿನ ಡೆಮೋಕ್ರಾಟ್ ಸದಸ್ಯರು ಬೆಂಬಲಿಸಿದ್ದು, 60-39 ಮತಗಳ ಅಂತರದಿಂದ ಇದು ಅಂಗೀಕಾರವಾಯಿತು.
ಹಲವಾರು ತಿಂಗಳುಗಳಿಂದ ಈ ಕುರಿತ ಮಸೂದೆಯು ಭಾರೀ ಚರ್ಚೆಗೆ ಕಾರಣವಾಗಿದ್ದು, ಅಮೆರಿಕ ಅಧ್ಯಕ್ಷ ಒಬಾಮರ ಜನಪ್ರಿಯತೆಗೂ ಕುತ್ತು ತಂದಿತ್ತು. 'ಇದು ಅಮೆರಿಕನ್ನರಿಗೆ ದೊರೆತ ವಿಜಯ' ಎಂದು ಡೆಮೋಕ್ರಾಟಿಕ್ ಮುಖಂಡ ಹ್ಯಾರಿ ರೀಡ್ ಅವರು ಪ್ರತಿಕ್ರಿಯಿಸಿದ್ದಾರೆ.