ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್ :ಸಾಲ ವಸೂಲಾತಿಗೆ ಹಿಜಡಾಗಳ ನೇಮಕ (Pakistan, Hijras | Apex court | loan-recover)
Bookmark and Share Feedback Print
 
ಪಾಕಿಸ್ತಾನದ ಬ್ಯಾಂಕ್‌ಗಳು ಬಿಲಿಯನ್‌ಗಟ್ಟಲೆ ರೂಪಾಯಿಗಳ ಸಾಲವಸೂಲಾತಿಯಲ್ಲಿ ಹಿನ್ನೆಡೆ ಅನುಭವಿಸಿದ್ದರಿಂದ,ಹಿಜಡಾಗಳನ್ನು ಸಾಲ ವಸೂಲಾತಿಗೆ ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಇಫ್ತೇಕಾರ್ ಚೌಧರಿ ನೇತೃತ್ವದ ಮೂವರು ನ್ಯಾಯಮೂರ್ತಿಗಳಿದ್ದ ನ್ಯಾಯಪೀಠ, ಹಿಜಡಾಗಳಿಗೆ ಮುಲಭೂತ ಹಕ್ಕುಗಳನ್ನು ನೀಡಬೇಕು ಎನ್ನುವ ವೆಲ್‌‌ಫೇರ್ ಟ್ರಸ್ಟ್‌ನ ಮುಖ್ಯಸ್ಥ ಮುಹಮ್ಮದ್ ಅಸ್ಲಾಮ್ ಖಾನ್ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಹಿಜಡಾಗಳಿಗೆ ಉದ್ಯೋಗವಕಾಶ ನೀಡುವಂತೆ ಸರಕಾರಕ್ಕೆ ಸಲಹೆ ನೀಡಿತು.

ಹಿಜಡಾ ಸಂಘದ ಅಧ್ಯಕ್ಷರಾದ ಅಲ್ಮಾಸ್ ಬಾಬ್ಬಿ, ಅಪೆಕ್ಸ್ ನ್ಯಾಯಾಲಯದ ಸಲಹೆಯನ್ನು ಸ್ವಾಗತಿಸಿ, ಬ್ಯಾಂಕ್‌ಗಳ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ಮನೆ ಮನೆಗೆ ತೆರಳಿ ನೃತ್ಯ,ಚಪ್ಪಾಳೆ ಹಾಗೂ ಹಾಡುವ ಮೂಲಕ ಸಾಲವನ್ನು ಮರುಪಾವತಿಸುವಂತೆ ಕೋರಲಾಗುವುದು ಎಂದು ಹೇಳಿದ್ದಾರೆ.

1997ರಿಂದ 2009ರ ವರೆಗೆ ದೇಶದ 30 ಬ್ಯಾಂಕ್‌ಗಳು 193.4 ಬಿಲಿಯನ್ ರೂಪಾಯಿಗಳ ನೀಡಿದ ಸಾಲವನ್ನು ಹಿಂಪಡೆಯಲು ವಿಫಲವಾಗಿವೆ ಎನ್ನುವ ವಿಚಾರಣೆ ಕೆಲ ದಿನಗಳಿಂದ ಅಪೆಕ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಸರಕಾರ ಹಾಗೂ ಬ್ಯಾಂಕ್‌ಗಳು ಸಾಲ ವಸೂಲಾತಿಗಾಗಿ ಹಿಜಡಾಗಳನ್ನು ಬಳಸಿಕೊಂಡಲ್ಲಿ ವಸೂಲಾತಿಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಮತ್ತು ಹಿಜಡಾಗಳಿಗೆ ಉದ್ಯೋಗವಕಾಶಕಗಳನ್ನು ಕಲ್ಪಿಸಿದಂತಾಗುತ್ತದೆ ಎಂದು ಸಲಹೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ