ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಹಿಳೆ ಡಿಕ್ಕಿ: ಆಯತಪ್ಪಿ ಬಿದ್ದ ಪೋಪ್ ಬೆನ್‌ಡಿಕ್ಟ್ (Cristmas | Pope bendict)
Bookmark and Share Feedback Print
 
ಕ್ರಿಸ್‌ಮಸ್ ಹಬ್ಬದ ಪೂರ್ವವಾಗಿ ಆಯೋಜಿಸಿದ ಸಮಾರಂಭದಲ್ಲಿ ಪೋಪ್ ಬೆನ್‌ಡಿಕ್ಟ್‌, ಪೀಟರ್ಸ್ ಬ್ರೆಸಿಲಿಕಾವನ್ನು ಪ್ರವೇಶಿಸಿದ ನಂತರ ಮಹಿಳೆಯೊಬ್ಬಳು ಡಿಕ್ಕಿ ಹೊಡೆದಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದರೆಂದು ವ್ಯಾಟಿಕನ್ ವಕ್ತಾರರು ತಿಳಿಸಿದ್ದಾರೆ.

ಫಾದರ್ ಫೆಡ್ರಿಕೊ ಲೊಬಾಡಿಯವರು ಮಾತನಾಡಿ, ಸಾಂಪ್ರದಾಯಿಕ ಮೆರವಣಿಗೆಯಲ್ಲಿ ನೇತೃತ್ವವಹಿಸಲು ಪೋಪ್ ಮುಂದೆ ಸಾಗುತ್ತಿರುವಾಗ ಸುರಕ್ಷಾ ಪಡೆಗಳನ್ನು ಭೇಧಿಸಿ ಓಡಿ ಬಂದ ಯುವತಿಯೊಬ್ಬಳು ಪೋಪ್‌ಗೆ ಡಿಕ್ಕಿ ಹೊಡೆದಿದ್ದರಿಂದ, ಪೋಪ್ ಕೆಳಗೆ ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಪೋಪ್ ಬೆನ್‌ಡಿಕ್ಟ್‌ಗೆ ಡಿಕ್ಕಿಹೊಡೆದ ಮಹಿಳೆಯನ್ನು ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದು, ಪೋಪ್‌ಗೆ ನಷ್ಟ ಉಂಟುಮಾಡುವ ಯಾವುದೇ ಉದ್ದೇಶವನ್ನು ಮಹಿಳೆ ಹೊಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ನಂತರ ಯಾರ ಸಹಾಯವು ಇಲ್ಲದೇ ಎದ್ದು ನಿಂತ 82 ವರ್ಷದ ಪೋಪ್, ಕಾರ್ಯಕ್ರಮಗಳನ್ನು ಪೂರ್ತಿಗೊಳಿಸಿದರು. ಆದರೆ ಮುಂದಿನ ಕಾರ್ಯಕ್ರಮಗಳು ನೀರಸವಾದವು ಎಂದು ಮೂಲಗಳು ತಿಳಿಸಿವೆ.

ಪೋಪ್ ಬೆನ್‌ಡಿಕ್ಟ್ ಮಾತನಾಡಿ, ಸ್ವಾರ್ಥತೆಯಿಂದಾಗಿ ಜಗತ್ತು ಸತ್ಯದಿಂದ ದೂರವಾಗುತ್ತಿದೆ ಪ್ರತಿಯೊಬ್ಬರನ್ನು ದೂರವಾಗಿಸುತ್ತಿರುವುದರಿಂದ, ಸ್ವಾರ್ಥದಿಂದ ವಿಮುಖರಾಗಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಬೇಕು ಎಂದು ಜನತೆಗೆ ಕ್ರಿಸ್‌ಮಸ್ ಹಬ್ಬದ ಸಂದೇಶ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ