ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿಮಾನ ಸ್ಫೋಟ ಬೆದರಿಕೆ: ಖಾಯಿದಾ ಉಗ್ರನ ಸೆರೆ (Al-Qaeda | Bomb Threat | Terror | US)
Bookmark and Share Feedback Print
 
ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಗೆ ಸೇರಿದವನೆನ್ನಲಾದ ನೈಜೀರಿಯಾ ಪ್ರಯಾಣಿಕನೊಬ್ಬ, ಅಂಸ್ಟರ್‌ಡ್ಯಾಮ್ ನಿಲ್ದಾಣದಿಂದ ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕದ ವಿಮಾನವನ್ನು ಸ್ಫೋಟಿಸಲು ಪ್ರಯತ್ನಿಸಿದ್ದು, ಇದು ಅಮೆರಿಕದ ವಿರುದ್ಧ ಭಯೋತ್ಪಾದನಾ ಕೃತ್ಯ ಎಂದು ಶ್ವೇತಭವನ ವರ್ಣಿಸಿದೆ.

ಶುಕ್ರವಾರ ವಿಮಾನವು ಇಳಿಯುವುದರಲ್ಲಿದ್ದಾಗ ಅಬ್ದುಲ್ ಮುದಲ್ಲದ್ (23) ಎಂಬಾತ ಸಣ್ಣ ಸ್ಫೋಟಕಗಳನ್ನು ಸಿಡಿಸಲು ಪ್ರಯತ್ನಿಸಿದ. ಈ ಘಟನೆಯ ಹಿನ್ನೆಲೆಯಲ್ಲಿ ಎಫ್‌ಬಿಐ ರಾಷ್ಟ್ರಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ.

ಘಟನೆಯಲ್ಲಿ ಅಬ್ದುಲ್ ಮತ್ತು ಇತರ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಬ್ದುಲ್‌ನನ್ನು ಬಂಧಿಸಲಾಗಿದೆ. ಆದರೆ ವಿಮಾನವು ಸುರಕ್ಷಿತವಾಗಿ ಕೆಳಗಿಳಿಯಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಘಟನೆ ಬಗ್ಗೆ ಎಫ್‌ಬಿಐ ಏಜೆಂಟರು ತನಿಖೆ ಆರಂಭಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ