ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ತ್ಸುನಾಮಿ ಮಹಾದುರಂತಕ್ಕೆ ಐದರ ವರ್ಷಾಚರಣೆ (Indonesia | Tsunami | Asia | Fifth anniversary | Thai monks)
Bookmark and Share Feedback Print
 
ಜಗತ್ತಿನ ಸುಮಾರು 13ದೇಶಗಳಲ್ಲಿ ಏಕಾಏಕಿ ಆರ್ಭಟಿಸಿದ ತ್ಸುನಾಮಿ ದುರಂತಕ್ಕೆ ಲಕ್ಷಾಂತರ ಜನರು ಬಲಿಯಾಗಿದ್ದರು. ಆ ಕರಾಳ ಘಟನೆ ನಡೆದು ಐದು ವರ್ಷವಾಗಿದ್ದು, ಆ ನಿಟ್ಟಿನಲ್ಲಿ ಸಾವಿರಾರು ಮಂದಿ ಬೌದ್ಧ ಧರ್ಮಿಯರು ಥೈಲ್ಯಾಂಡ್‌ನಲ್ಲಿ ತ್ಸುನಾಮಿ ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಶನಿವಾರ ಶ್ರದ್ಧಾಂಜಲಿ ಅರ್ಪಿಸಿದರು.

ಥೈಲ್ಯಾಂಡ್‌ನ ಬಾನ್ ನಾಮ್ ಖೇಮ್‌ನಲ್ಲಿ ಸೇರಿದ ಸುಮಾರು ಸಾವಿರಾರು ಬೌದ್ಧ ಧರ್ಮಿಯರು,ತ್ಸುನಾಮಿ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಥೈಲ್ಯಾಂಡ್ ಅಂಡಮಾನ್ ಕರಾವಳಿ ಪ್ರದೇಶ ಸಮೀಪದ ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ ವಾಸವಾಗಿದ್ದ 5ಸಾವಿರ ಮಂದಿಯಲ್ಲಿ ಎರಡೂವರೆ ಸಾವಿರ ಜನ ತ್ಸುನಾಮಿ ಅಟ್ಟಹಾಸಕ್ಕೆ ಬಲಿಯಾಗಿದ್ದರು.

2004ರ ಡಿಸೆಂಬರ್ 26ರಂದು ಭಾರತದ ತಮಿಳುನಾಡಿನ ನಾಗಪಟ್ಟಣಂ ಸೇರಿದಂತೆ ಜಗತ್ತಿನ 13ದೇಶಗಳಲ್ಲಿ ಅಬ್ಬರಿಸಿದ ತ್ಸುನಾಮಿಯ ರಕ್ಕಸ ಅಲೆಗಳಿಗೆ 226,000 ಜನರು ಇಹಲೋಕ ತ್ಯಜಿಸಿದ್ದರು.

ನೀವು ದೇಶದ ಯಾವುದೇ ಭಾಗದಲ್ಲಿರಿ ತ್ಸುನಾಮಿ ದುರಂತದಲ್ಲಿ ಮಡಿದವರಿಗಾಗಿ ನಾವು ಸಲ್ಲಿಸುತ್ತಿರುವ ಪ್ರಾರ್ಥನೆಯನ್ನು ನೀವು(ದುರಂತಕ್ಕೀಡಾದ ದೇಶದ ಕುಟುಂಬಿಕರು) ಸ್ವೀಕರಿಸಿ ಎಂದು ಕುಲಾರ್ಬ್ ಪಾಲಿಮೈಯೈ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ