ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮುಷರ್ರಫ್ ಒಪ್ಪಿಗೆ ಮೇರೆಗೆ ಭುಟ್ಟೋ ಹತ್ಯೆ: ಹಸನ್ (Nawaz Sharif | Baitullah Mehsud | Benazir Bhutto | Benazir | Musharraf)
Bookmark and Share Feedback Print
 
PTI
ಪಾಕಿಸ್ತಾನದ ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರ ಹತ್ಯೆಯ ಹೊಣೆಗಾರ ಪಾಕ್‌ನ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರ್ರಫ್ ಎಂದು ಗಂಭೀರವಾಗಿ ಆರೋಪಿಸಿರುವ ಬ್ರಿಟನ್‌ನಲ್ಲಿನ ಪಾಕ್ ಹೈ ಕಮೀಷನರ್ ಆಗಿರುವ ವಾಜಿದ್ ಶ್ಯಾಮ್ಸ್‌‌ಸುಲ್ ಹಸ್ಸನ್, ಮುಷರ್ರಫ್ ಅವರ ಅನುಮತಿ ಇಲ್ಲದೆಯೇ ಭುಟ್ಟೋ ಅವರನ್ನು ತೆಹ್ರೀಕ್ ಇ ತಾಲಿಬಾನ್ ವರಿಷ್ಠ ಬೈತುಲ್ಲಾ ಮೆಹ್ಸೂದ್ ಹತ್ಯೆಗೈಯುವ ಯೋಜನೆ ರೂಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಖಾಸಗಿ ಟಿವಿ ಚಾನೆಲ್‌ವೊಂದು ಹಸನ್ ಅವರ ಹೇಳಿಕೆಯ ವರದಿ ಬಿತ್ತರಿಸಿದೆ. ಬೇನಜೀರ್ ಅವರು ಜೀವಂತವಾಗಿದ್ದರೆ, ತನಗೆ ಸಮಸ್ಯೆ ಇಮ್ಮಡಿಯಾಗುತ್ತದೆ ಎಂಬ ಆತಂಕ ಮುಷ್ ಅವರಿಗಿತ್ತು ಎಂದು ಹೇಳಿದ್ದಾರೆ.

'ಒಂದು ವೇಳೆ ಬೇನಜಿರ್ ಅವರು ಬದುಕುಳಿದಿದ್ದರೆ, ಮುಷರ್ರಫ್ ಅವರು ಬಲೂಚಿಸ್ತಾನ್ ಮಾಜಿ ರಾಜ್ಯಪಾಲ ನವಾಬ್ ಅಕ್ಬರ್ ಅವರ ಹತ್ಯೆ ಪ್ರಕರಣದ ಕುರಿತಂತೆ ಕಾನೂನು ವಿಚಾರಣೆ ಎದುರಿಸಬೇಕಾಗುತ್ತಿತ್ತು' ಎಂದು ಹಸನ್ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಆ ನಿಟ್ಟಿನಲ್ಲಿ ಬೇನಜಿರ್ ಅವರ ಹತ್ಯೆಯನ್ನು ಬೈತುಲ್ಲಾ ಮೆಹ್ಸೂದ್ ಮುಷರ್ರಫ್ ಅವರ ಅಪ್ಪಣೆಯ ಮೇರೆಗೆ ಹತ್ಯೆಗೈದಿರುವುದಾಗಿ ಅವರು ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ