ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಬಯಲಾದ 'ಫೇಸ್' ಬುಕ್: ಇಬ್ಬರಿಗೂ ಒಬ್ಬನೇ ಗಂಡ! (Mexico | Facebook | China Daily | Beijing | bigamy)
Bookmark and Share Feedback Print
 
ಹಸೆಮಣೆ ಏರಲು ಹಲವು ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತದೆ. ಅದೇ ರೀತಿ ದಾಂಪತ್ಯ ಜೀವನಕ್ಕೆ ಕಾಲಿಸರಿಸಲು ಹೊರಟ ಮಧುವಣಗಿತ್ತಿಯರು ಸಮುದಾಯ ತಾಣಕ್ಕೆ ಮೊರೆ ಹೋಗಿ, ಒಬ್ಬನನ್ನೇ ಗಂಡನನ್ನಾಗಿ ಪಡೆದ ವಿಷಯ ಬಹಿರಂಗವಾಗುತ್ತಿದ್ದಂತೆಯೇ ವಂಚಿಸಿ ದ್ವಿಪತ್ನಿತ್ವ ಹೊಂದಿದ ಆರೋಪದ ಮೇಲೆ ಚೀನಾದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ!

ಚೀನಾ ಮೂಲದ ಮೆಕ್ಸಿಕೋ ಪ್ರಜೆಯಾಗಿರುವ ಚಾಂಗ್ ಪೊಲೀಸರ ಅತಿಥಿಯಾಗಿರುವ ಆರೋಪಿಯಾಗಿದ್ದಾನೆ. ಸಮುದಾಯ ತಾಫೇಸ್ ಬುಕ್ ಮೂಲಕ ಹೆಂಡತಿಯರಿಬ್ಬರನ್ನು ವರಿಸಿದ ವರ ಒಬ್ಬನೇ ವ್ಯಕ್ತಿ ಎಂಬುದು ಬಹಿರಂಗಗೊಂಡ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ ಎಂದು ಚೀನಾ ಡೈಲಿ ವರದಿಯೊಂದು ತಿಳಿಸಿದೆ.

ಮದುವೆಯ ಫೋಟೋಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಒಬ್ಬನೇ ವ್ಯಕ್ತಿ ತಮ್ಮಿಬ್ಬರ ಗಂಡ ಎಂಬ ವಿಷಯ ಹೊರ ಬಂದಿತ್ತು ಎಂದು ವರದಿ ಹೇಳಿದೆ.

ಬೀಜಿಂಗ್‌ನಲ್ಲಿ ಯುವತಿಯೊಬ್ಬಳನ್ನು ಭೇಟಿಯಾದ ನಂತರ ಆಕೆಯೊಂದಿಗೆ ವಿವಾಹವಾಗಿದ್ದ. ಚಾಂಗ್ ಜೆಜಿಯಾಂಗ್‌ನಲ್ಲಿ 2005ರಲ್ಲಿ ಎರಡನೇ ವಿವಾಹವಾಗಿದ್ದ. ನಂತರ ಆತ ಮೆಕ್ಸಿಕೋದಲ್ಲಿ ವ್ಯವಹಾರ ನಡೆಸುತ್ತಿದ್ದ. ಆದರೆ ಈತ ಮೊದಲನೇ ಇಬ್ಬರು ಹೆಂಡತಿಯರು ಇರುವ ವಿಷಯವನ್ನು ಮುಚ್ಚಿಟ್ಟಿದ್ದ. ಚಾಂಗ್ ಜೆಜಿಯಾಂಗ್ ಮತ್ತು ಬೀಜಿಂಗ್ ಎರಡು ಮನೆಗಳಲ್ಲಿ ಕಾಲ ಕಳೆಯುತ್ತಿದ್ದ.

ಅಂತೂ ಕೊನೆಗೂ ಚಾಂಗ್‌ನ ಕಳ್ಳಾಟ ಬಯಲಾಗಿದ್ದು, ಮೊದಲ ಪತ್ನಿ ಚಾಂಗ್ ವಿರುದ್ಧ ವಂಚನೆ ಆರೋಪದ ಮೇಲೆ ದೂರು ಸಲ್ಲಿಸಿದ್ದಾಳೆ. ಆ ನಿಟ್ಟಿನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ