ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭುಟ್ಟೋ ಹತ್ಯೆ ಸಾಕ್ಷ್ಯವನ್ನು ಜರ್ದಾರಿ ನಾಶಪಡಿಸಿದ್ದಾರೆ: ಮುಮ್ತಾಜ್ (Pakistan | Asif Ali Zardari | Benazir Bhutto | assassination | Mumtaz Bhutto,)
Bookmark and Share Feedback Print
 
PTI
ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಅವರ ಹತ್ಯೆಯ ಸಾಕ್ಷ್ಯಗಳನ್ನು ಸ್ವತಃ ಪತಿಯಾಗಿರುವ ಪಾಕಿಸ್ತಾನ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯವರೇ ನಾಶಪಡಿಸಿದ್ದಾರೆಂದು ಭುಟ್ಟೋ ಕುಟುಂಬದ ನಿಕಟ ಸಂಬಂಧಿಯೇ ಬಹಿರಂಗವಾಗಿ ಆರೋಪಿಸಿದ್ದಾರೆ.

ಬೇನಜಿರ್ ಭುಟ್ಟೋ ಅವರ ತಂದೆ ಜುಲ್ಫಿಕರ್ ಅಲಿ ಭುಟ್ಟೋ ಅವರ ಸಹೋದರಿಯಾಗಿರು ಮುಮ್ತಾಜ್ ಭುಟ್ಟೋ ಸಿಂಧ್ಯ ಪ್ರಾಂತ್ಯದ ಟಾನ್‌ಡೋಜಮ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಭುಟ್ಟೋ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜರ್ದಾರಿ ವಿರುದ್ಧ ವಾಗ್ದಾಳಿ ಹರಿಸಿದರು.

ಭುಟ್ಟೋ ಹತ್ಯೆ ನಡೆದು ಎರಡು ವರ್ಷಗಳ ಬಳಿಕ ಕಿಡಿಕಾರಿರುವ ಮುಮ್ತಾಜ್, ಈವರೆಗೂ ಹಂತಕರನ್ನು ಬಂಧಿಸಿಲ್ಲ ಹಾಗೂ ದೂರನ್ನೂ ದಾಖಲಿಸಿಲ್ಲ ಎಂದು ದೂರಿದರು.

2007 ಡಿಸೆಂಬರ್ 27ರಂದು ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರ ರಾಲಿ ಉದ್ದೇಶಿಸಿ ಮಾತನಾಡಿದ ಬಳಿಕ ತೆರಳುತ್ತಿರುವ ವೇಳೆ ಸಂಭವಿಸಿದ ಗನ್ ಮತ್ತು ಬಾಂಬ್ ದಾಳಿಯಲ್ಲಿ ಬೇನಜಿರ್ ಭುಟ್ಟೋ ಅವರನ್ನು ಹತ್ಯೆಗೈಯಲಾಗಿತ್ತು.

ಬೇನಜಿರ್ ಹತ್ಯೆ ಕುರಿತಂತೆ ಪಾಕಿಸ್ತಾನದ ಅಧಿಕಾರಿಗಳು ಸೇರಿದಂತೆ ಸ್ಕಾಟ್‌ಲ್ಯಾಂಡ್ ಯಾರ್ಡ್ ಪೊಲೀಸರು ತನಿಖೆ ನಡೆಸುತ್ತಿದ್ದರೂ ಕೂಡ ಹಂತಕರನ್ನು ಪತ್ತೆ ಹಚ್ಚುವಲ್ಲಿ ವಿಫಲರಾಗಿದ್ದಾರೆ. ಅಲ್ಲದೇ, ಪ್ರಸಕ್ತವಾಗಿ ವಿಶ್ವಸಂಸ್ಥೆ ತಂಡ ಸಹ ತನಿಖೆ ನಡೆಸುತ್ತಿದ್ದರೂ ಅದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ಭುಟ್ಟೋ ಅವರ ಹತ್ಯೆಗೈದ ಘಟನೆ ನಡೆದ ತಕ್ಷಣವೇ ಆ ಸ್ಥಳವನ್ನು ಸ್ವಚ್ಚಗೊಳಿಸುವ ಮೂಲಕ ಸಾಕ್ಷ್ಯವನ್ನು ನಾಶಪಡಿಸಿದ್ದಾರೆ ಎಂದು ಮುಮ್ತಾಜ್ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ