ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಚೀನಾಕ್ಕೆ ನೇಪಾಳ ಪ್ರಧಾನಿ ಮಾಧವ್ ಭೇಟಿ (China | Madhav Kumar | Nepal | Maoist party)
Bookmark and Share Feedback Print
 
ಉಭಯ ರಾಷ್ಟ್ರಗಳ ನಡುವಿನ ಸಂಬಂಧವನ್ನು ದೃಢಗೊಳಿಸುವ ಸಲುವಾಗಿ ನೇಪಾಳದ ಮುಖ್ಯಮಂತ್ರಿ ಮಾಧವ್ ಕುಮಾರ್ ನೇಪಾಳ್ ಅವರು ಚೀನಾಕ್ಕೆ ಆರು ದಿನಗಳ ಪ್ರವಾಸವನ್ನು ಕೈಗೊಂಡಿದ್ದಾರೆ.

ನೇಪಾಳದ ಪ್ರಧಾನಿ ಪಟ್ಟ ಅಲಂಕರಿಸಿದ ನಂತರ ಇದೇ ಮೊದಲ ಬಾರಿಗೆ ನೇಪಾಳ ಪ್ರಧಾನಿ ಚೀನಾಕ್ಕೆ ಅಧಿಕೃತವಾಗಿ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯಲ್ಲಿ ಆರ್ಥಿಕ ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 15ಬಿಲಿಯನ್ ಯಾನ್ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ. ಆದಾಗ್ಯೂ ನೇಪಾಳದಲ್ಲಿ ಹೈಡ್ರೋಪವರ್ ಯೋಜನೆ ಮತ್ತು ಹೈವೇಗಳ ನಿರ್ಮಾಣಕ್ಕೆ ನೇಪಾಳ ಬೀಜಿಂಗ್‌ನ ಸಹಾಯ ಕೋರಲಿದೆ.

ನೇಪಾಳ ಸಿಎಂ ಜೊತೆ ನೇಪಾಳದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಸುಜಾತಾ ಕೊಯಿರಾಲಾ, ಆರ್ಥಿಕ ಸಚಿವ ಸುರೇಂದ್ರ ಪಾಂಡೆ ಮತ್ತು ಶಕ್ತಿ ಸಂಪನ್ಮೂಲ ಸಚಿವ ಪ್ರಕಾಶ್ ಶರಣ್ ಮಹತ್ ಪ್ರವಾಸದಲ್ಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚೀನಾ, ನೇಪಾಳ, ಮಾಧವ್ ಕುಮಾರ್