ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕನ್ ಜಿಹಾದಿಗಳಿಂದ ಪಾಕ್ ನ್ಯೂಕ್ಲಿಯರ್ ಘಟಕ ಟಾರ್ಗೆಟ್ (jihad | America | Taliban | Facebook | police | Pakistan)
Bookmark and Share Feedback Print
 
ಇತ್ತೀಚೆಗಷ್ಟೇ ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟಿರುವ ಐದು ಮಂದಿ ಅಮೆರಿಕನ್‌ರಿಂದ ಪಾಕ್‌ನಲ್ಲಿರುವ ನ್ಯೂಕ್ಲಿಯರ್ ಘಟಕದ ಮೇಲೆ ದಾಳಿ ನಡೆಸಲು ತಾಲಿಬಾನ್ ಸಂಚು ನಡೆಸಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ಪಾಕ್‌ನಲ್ಲಿ ಸೆರೆ ಸಿಕ್ಕಿರುವ ಐದು ಮಂದಿ ಅಮೆರಿಕನ್ ಮುಸ್ಲಿಂ ಶಂಕಿತ ಉಗ್ರರ ಮೂಲಕ ಈ ದಾಳಿ ನಡೆಸಲು ತಾಲಿಬಾನ್ ಯೋಜನೆ ರೂಪಿಸಿತ್ತು ಎಂದು ಸರ್ಗೋಧಾದ ಪೊಲೀಸ್ ವರಿಷ್ಠಾಧಿಕಾರಿ ಉಸ್ಮಾನ್ ಅನ್ವರ್ ವಿವರಿಸಿದ್ದಾರೆ. ಅದಕ್ಕಾಗಿಯೇ ವರ್ಜಿನಿಯಾದಿಂದ ಯುವಕನೊಬ್ಬ ಪಾಕಿಸ್ತಾನಕ್ಕೆ ಆಗಮಿಸಿದ್ದ ಎಂಬ ವಿಷಯ ಇ-ಮೇಲ್‌ನಿಂದ ಬಹಿರಂಗಗೊಂಡಿದೆ ಎಂದು ಹೇಳಿದ್ದಾರೆ.

ಅವರಿಗೆ ದೇಶದೊಳಗಿನಿಂದಲೇ ಬೆಂಬಲ ಇದೆ ಎಂದು ನಾವು ಶಂಕಿಸುತ್ತೇವೆ ಎಂದು ತಿಳಿಸಿರುವ ಅನ್ವರ್, ತಾಲಿಬಾನ್‌ಗೆ ಕಳುಹಿಸಿರುವ ಕೊನೆಯ ಇ-ಮೇಲ್ ಪ್ರಕಾರ ಚಾಸ್ಮಾ ನ್ಯೂಕ್ಲಿಯರ್ ಪ್ಲ್ಯಾಂಟ್ ಅನ್ನು ತಾವು ಪತ್ತೆ ಹಚ್ಚಿರುವುದಾಗಿ ಅವರು ನಮೂದಿಸಿರುವುದಾಗಿ ವಿವರಿಸಿದ್ದಾರೆ.

ಆದರೆ ಬಂಧಿತ ಉಗ್ರರ ಸಂಚು ಮತ್ತು ಇನ್ನುಳಿದ ವಿವರಗಳನ್ನು ನೀಡಲು ಅನ್ವರ್ ನಿರಾಕರಿಸಿದ್ದಾರೆ. ಶಂಕಿತ ಉಗ್ರರ ವಿರುದ್ಧದ ತನಿಖೆ ಮುಂದುವರಿಯುತ್ತಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ವಿವರ ಈಗ ನೀಡಲು ಸಾಧ್ಯವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ