ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ವಿಮಾನ ಸ್ಫೋಟಕ್ಕೆ ಯತ್ನಿಸಿದಾತ ಬ್ಯಾಂಕರ್‌ ಪುತ್ರ! (London | Al-Qaeda | Washington | Umar Farouk | Nigeria)
Bookmark and Share Feedback Print
 
ಅಮೆರಿಕದ ವಿಮಾನವನ್ನು ಸ್ಫೋಟಿಸಲು ಸಂಚು ನಡೆಸಲು ವಿಫಲನಾಗಿ ಸೆರೆಯಾಳಾಗಿರುವ ಯುವಕ ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕರ್‌ವೊಬ್ಬರ ಪುತ್ರ ಎಂಬ ವಿಷಯ ಬಯಲಾಗಿದ್ದು, ಆತ ದುಬೈಗೆ ತೆರಳುವ ಮುನ್ನ ಬ್ರಿಟನ್‌ನಲ್ಲಿ ಕಾಲೇಜ್‌ವೊಂದರ ವಿದ್ಯಾರ್ಥಿಯಾಗಿದ್ದ ಎಂದು ಕುಟುಂಬ ಮತ್ತು ಕಚೇರಿ ಮೂಲಗಳು ತಿಳಿಸಿವೆ. .

ಉಮರ್ ಫಾರೂಕ್ ಅಬ್ದುಲ್ ಮುತಾಲ್ಲಾಬ್ಶ್(23ವ) ಲಂಡನ್ ಕಾಲೇಜ್‌ ಯೂನಿರ್ವಸಿಟಿಯಿಂದ ಡಿಗ್ರಿ ಪಡೆದಿದ್ದ. ಆತನ ಕುಟುಂಬ ನೈಜೀರಿಯಾದ ಕಾಡುನಾದಲ್ಲಿ ವಾಸ್ತವ್ಯ ಹೂಡಿದ್ದಾರೆ. 2005 ಸೆಪ್ಟೆಂಬರ್‌ ಮತ್ತು 2008ರ ಜೂನ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದಲ್ಲಿ ವಿದ್ಯಾರ್ಥಿಯಾಗಿದ್ದ ಎಂದು ಯೂನಿವರ್ಸಿಟಿ ವಕ್ತಾರ ಡೇವ್ ವೆಸ್ಟನ್ ತಿಳಿಸಿದ್ದಾರೆ.

ಫಾರೂಕ್ ತಂದೆ ಅಲ್‌ಹಾಜಿ ಉಮರ್ ಮುತಾಲ್ಲಾಬ್ ನೈಜೀರಿಯಾದ ಪ್ರತಿಷ್ಠಿತ ಹಾಗೂ ಮೊದಲ ಬ್ಯಾಂಕ್ ಪಿಎಲ್‌ಸಿಯ ಅಧ್ಯಕ್ಷಗಾದಿಯಿಂದ ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದರು. ಫಾರೂಕ್ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ದುಬೈಯಲ್ಲಿದ್ದ ಎಂದು ಸಿಎನ್‌ಎನ್‌ಗೆ ಕುಟುಂಬದ ಮೂಲಗಳು ಹೇಳಿವೆ.

ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಗೆ ಸೇರಿದವನೆನ್ನಲಾದ ನೈಜೀರಿಯಾ ಪ್ರಯಾಣಿಕನೊಬ್ಬ, ಆಮ್‌ಸ್ಟರ್‌ಡ್ಯಾಮ್ ನಿಲ್ದಾಣದಿಂದ ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕದ ವಿಮಾನವನ್ನು ಸ್ಫೋಟಿಸಲು ಪ್ರಯತ್ನಿಸಿದ್ದ. ಶುಕ್ರವಾರ ವಿಮಾನವು ಇಳಿಯುವುದರಲ್ಲಿದ್ದಾಗ ಅಬ್ದುಲ್ ಮುತಾಲ್ಲಾಬ್(23) ಸ್ಫೋಟಕಗಳನ್ನು ಸಿಡಿಸಲು ಪ್ರಯತ್ನಿಸಿದ್ದ. ಈ ಘಟನೆಯ ಹಿನ್ನೆಲೆಯಲ್ಲಿ ಎಫ್‌ಬಿಐ ರಾಷ್ಟ್ರಾದ್ಯಂತ ರೆಡ್ ಅಲರ್ಟ್ ಘೋಷಿಸಿತ್ತು.

ಘಟನೆಯಲ್ಲಿ ಅಬ್ದುಲ್ ಮತ್ತು ಇತರ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಬ್ದುಲ್‌ನನ್ನು ಎಫ್‌ಬಿಐ ಅಧಿಕಾರಿಗಳು ಬಂಧಿಸಿದ್ದು, ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ