ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಶಂಕಿತ ಉಗ್ರ ಹೆಡ್ಲಿ ಹಸ್ತಾಂತರಕ್ಕೆ ಎಫ್‌ಬಿಐ ನಕಾರ (India | David Headley | G K Pillai | Lashkar-e-Taiba)
Bookmark and Share Feedback Print
 
ಶಂಕಿತ ಉಗ್ರ ಡೇವಿಡ್ ಹೆಡ್ಲಿ ಹಸ್ತಾಂತರಕ್ಕೆ ಎಫ್‌ಬಿಐ ನಕಾರ ವ್ಯಕ್ತಪಡಿಸಿದ್ದು, ಮೊದಲು ಅಮೆರಿಕದಲ್ಲಿಯೇ ಹೆಡ್ಲಿ ವಿಚಾರಣೆ ನಡೆಸಿ ನಂತರ ಹಸ್ತಾಂತರದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದೆ.

ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾದ ಬಳಿಕ ಶಂಕಿತ ಭಯೋತ್ಪಾದಕ ಡೇವಿಡ್ ಹೆಡ್ಲಿಯನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು ಅಮೆರಿಕಕ್ಕೆ ಭಾರತ ಮನವಿ ಮಾಡಿತ್ತು.

49ರ ಹರೆಯದ ಪಾಕಿಸ್ತಾನಿ ಸಂಜಾತ ಅಮೆರಿಕ ಪ್ರಜೆ ಹೆಡ್ಲಿಯನ್ನು ಅಮೆರಿಕ ಅಕ್ಟೋಬರ್‌ನಲ್ಲಿ ಬಂಧಿಸಿತ್ತು. ಮುಂಬೈದಾಳಿಗೆ ಸ್ಥಳಗಳನ್ನು ಗುರುತಿಸಿದ ಆರೋಪವನ್ನು ಆತನ ಮೇಲೆ ಹೊರಿಸಲಾಗಿತ್ತು. ಈತನ ಸಹಚರ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ ರಾಣಾನನ್ನು ಕೂಡ ಎಫ್‌ಬಿಐ ಬಂಧಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ