ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉಗ್ರರು ಅಫ್ಘನ್-ಪಾಕ್ ಗಡಿಯಲ್ಲಿ ಅಡಗಿದ್ದಾರೆ:ಅಮೆರಿಕ (Afghanistan | Pakistan | US)
Bookmark and Share Feedback Print
 
ಅಮೆರಿಕದಲ್ಲಿ ನಡೆದ ಭಯೋತ್ಪಾದಕ ದಾಳಿಯ ರೂವಾರಿಗಳು, ಅಪ್ಘಾನಿಸ್ತಾನ-ಪಾಕಿಸ್ತಾನ ಗಡಿ ಪ್ರದೇಶದಲ್ಲಿದ್ದು,ಮತ್ತಷ್ಟು ದಾಳಿಗಳನ್ನು ನಡೆಸಲು ಯೋಜನೆಗಳನ್ನು ರೂಪಿಸುತ್ತಿದ್ದಾರೆ ಎಂದು ಅಮೆರಿಕದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಶ್ವೇತ ಭವನದ ವಕ್ತಾರರಾದ ರಾಬರ್ಟ್ ಗಿಬ್ಸ್ ಮಾತನಾಡಿ, ಅಧ್ಯಕ್ಷ ಒಬಾಮಾ ಅಡಳಿತದ ಅಧಿಕಾರಿಗಳು, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿರುವ ಉಗ್ರರ ತಾಣಗಳ ಬಗ್ಗೆ ನಿಗಾವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇರಾಕ್‌ನತ್ತ ಗಮನಹರಿಸುವುದನ್ನು ಬಿಟ್ಟು, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಬುಡಕಟ್ಟು ಪ್ರದೇಶಗಳಲ್ಲಿ ಗುಹೆಗಳಲ್ಲಿ ಹಾಗೂ ಮನೆಗಳಲ್ಲಿ ಕುಳಿತು ಅಮೆರಿಕದ ಮೇಲೆ ಭಯೋತ್ಪಾದಕ ದಾಳಿಗಳನ್ನು ರೂಪಿಸುವ ಉಗ್ರಗಾಮಿ ತಂಡಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದು ಗಿಬ್ಸ್ ಎನ್‌ಬಿಸಿ ಚಾನೆಲ್‌ಗೆ ತಿಳಿಸಿದ್ದಾರೆ.

ಜಾಗತಿಕ ಉಗ್ರಗಾಮಿ ಸಂಘಟನೆಗಳಾದ ಅಲ್‌ಕೈದಾ ಹಾಗೂ ತಾಲಿಬಾನ್‌ ಸಂಘಟನೆಗಳು ಹಲವಾರು ದೇಶಗಳಲ್ಲಿ ಸಂಪರ್ಕ ಜಾಲವನ್ನು ವಿಸ್ತರಿಸುತ್ತಿದ್ದು, ಅಮೆರಿಕ ಸೂಕ್ಷ್ಮವಾಗಿ ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ