ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕ: ಮತ್ತೊಬ್ಬ ನೈಜೀರಿಯಾ ಯುವಕನ ಬಂಧನ (Amsterdam | Nigerian | man | Detroit flight | Washington)
Bookmark and Share Feedback Print
 
ಅಮೆರಿಕ ವಿಮಾನವೊಂದನ್ನು ಸ್ಫೋಟಿಸಲು ವಿಫಲ ಯತ್ನ ನಡೆಸಿ ನೈಜೀರಿಯಾದ ಯುವಕನೊಬ್ಬ ಸೆರೆಸಿಕ್ಕ ಬೆನ್ನಲ್ಲೇ, ಭಾನುವಾರ ಮತ್ತೊಬ್ಬ ನೈಜೀರಿಯಾದ ಯುವಕ ಕೂಡ ಇಂತಹದ್ದೇ ಕೃತ್ಯಕ್ಕೆ ಮುಂದಾದ ಪರಿಣಾಮ ಪೊಲೀಸರ ಅತಿಥಿಯಾಗಿದ್ದಾನೆ.

ಭಾನುವಾರ ಆಮ್‌ಸ್ಟರ್‌ಡ್ಯಾಮ್‌ನಿಂದ ಡೆಟ್ರಾಯಿಟ್‌ಗೆ ಹೊರಟ ಅಮೆರಿಕ ವಿಮಾನವೊಂದರಲ್ಲಿ ನೈಜೀರಿಯಾದ ಯುವಕ ದಾಂಧಲೆ ಎಬ್ಬಿಸಿ ಸ್ಫೋಟಿಸುವ ಬೆದರಿಕೆ ಹಾಕಿದ ವಿರುದ್ಧ ಪ್ರಯಾಣಿಕರು ದೂರಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದಾರೆ.

ಕೂಡಲೇ ಪೈಲಟ್ ಮಾಹಿತಿ ನೀಡಿದ್ದು,ಪೊಲೀಸರು ಮತ್ತು ಕಮಾಂಡೋಗಳು ವಿಮಾನ ಸುತ್ತುವರಿದು ಆತನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಬಂಧಿತ ನೈಜೀರಿಯಾದ ಯುವಕ ಆಮ್‌ಸ್ಟರ್‌ಡ್ಯಾಂನಿಂದ ಹೊರಟ ಡೆಲ್ಟಾ-ವಾಯುವ್ಯ 253 ವಿಮಾನದಲ್ಲಿ ಶಂಕಿತ ಕೃತ್ಯ ನಡೆಸಿದ ಪರಿಣಾಮ ಬಂಧಿಸಲಾಗಿದೆ ಎಂದು ಮೆಟ್ರೋ ಏರ್‌ಪೋರ್ಟ್ ಅಧಿಕಾರಿಗಳು ಹೇಳಿದ್ದಾರೆ.

ಶುಕ್ರವಾರ ಅಮ್‌ಸ್ಟರ್‌ಡ್ಯಾಮ್ ನಿಲ್ದಾಣದಿಂದ ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕದ ವಿಮಾನವನ್ನು ಸ್ಫೋಟಿಸಲು ಪ್ರಯತ್ನಿಸಿದ್ದ ನೈಜೀರಿಯಾದ ಅಬ್ದುಲ್ ಮುದಲ್ಲಾಬ್ (23) ಎಂಬಾತನನ್ನು ಬಂಧಿಸಿದ್ದರು. ಈತ ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕರ್ ಒಬ್ಬರ ಪುತ್ರ ಎಂಬುದಾಗಿಯೂ ಕೂಡ ಬಹಿರಂಗವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ