ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕಡಲ್ಗಳ್ಳರಿಂದ ಚೀನಾ ಹಡಗು ಬಿಡುಗಡೆ, ಸಿಬ್ಬಂದಿಗಳ ರಕ್ಷಣೆ (Somali Pirates | China | Ship crew | COSCO)
Bookmark and Share Feedback Print
 
ಅಕ್ಟೋಬರ್ ತಿಂಗಳಲ್ಲಿ ಅಪಹರಣಕ್ಕೊಳಗಾಗಿದ್ದ ಚೀನಾ ಹಡಗು ಹಾಗೂ ಅದರಲ್ಲಿನ 25 ಸಿಬ್ಬಂದಿಗಳನ್ನು ಸೋಮಾಲಿ ಕಡಲ್ಗಳ್ಳರು ಬಿಡುಗಡೆ ಮಾಡಿದ್ದಾರೆ. ಆದರೆ ಇದಕ್ಕಾಗಿ ಎಷ್ಟು ಒತ್ತೆ ಹಣ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಲು ಚೀನಾ ಸರಕಾರ ನಿರಾಕರಿಸಿದೆ.

ಕಲ್ಲಿದ್ದಲು ಸಾಗಿಸುತ್ತಿದ್ದ 'ಡೆ ಕ್ಸಿನ್ ಹೈ' ಎಂಬ ಕಾಸ್ಕೋ ಮಾಲಕತ್ವದ ಹಡಗನ್ನು ಅಕ್ಟೋಬರ್ ಮಧ್ಯದಲ್ಲಿ ಸೋಮಾಲಿಯಾ ಉಗ್ರರು ಅಪಹರಿಸಿದ್ದರು. ಈ ಹಡಗು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಪ್ರಯಾಣಿಸುತ್ತಿತ್ತು.

ಹಡಗು ನಮ್ಮ ವಶದಲ್ಲಿದ್ದು, ಚೀನಾ ಯುದ್ಧ ಹಡಗುಗಳು ಇದಕ್ಕೆ ರಕ್ಷಣೆ ನೀಡುತ್ತಿವೆ. ಅದರಲ್ಲಿರುವ ಸಿಬ್ಬಂದಿಗಳ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಅವರನ್ನು ಸುರಕ್ಷಿತ ಪ್ರದೇಶಕ್ಕೆ ಕರೆ ತರಲಾಗುತ್ತದೆ. ಶೀಘ್ರದಲ್ಲೇ ಅವರು ಚೀನಾ ತಲುಪಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್ ಯೂ ತಿಳಿಸಿದ್ದಾರೆ.

ಈ ನಡುವೆ ಚೀನಾ ಸರಕಾರವು ಅಪಹರಣಕಾರರಿಗೆ 4 ಮಿಲಿಯನ್ ಡಾಲರ್ ಒತ್ತೆ ಹಣವನ್ನು ನೀಡಿದ್ದರೂ, ಈ ಕುರಿತು ಯಾವುದೇ ಹೇಳಿಕೆಯನ್ನು ನೀಡಲು ಚೀನಾ ನಿರಾಕರಿಸಿದೆ.

ಹೆಲಿಕಾಫ್ಟರ್ ಒಂದರಲ್ಲಿ ನಮ್ಮ ಹಡಗಿನ ಮೇಲೆ 4 ಮಿಲಿಯನ್ ಡಾಲರ್ ಮೊತ್ತವನ್ನು ಹಾಕಲಾಗಿದೆ. ಹಾಗಾಗಿ ಸಿಬ್ಬಂದಿಗಳನ್ನು ಮತ್ತು ಹಡಗನ್ನು ಶೀಘ್ರದಲ್ಲೇ ನಾವು ಬಿಡುಗಡೆ ಮಾಡುತ್ತೇವೆ ಎಂದು ಅಪರಹಣಕಾರರಲ್ಲೊಬ್ಬ ಸುದ್ದಿ ಸಂಸ್ಥೆಗೆ ತಿಳಿಸಿದ ಬೆನ್ನಿಗೆ, ಹಡಗನ್ನು ಬಿಡುಗಡೆ ಮಾಡಲಾಗಿದೆ ಎಂದು ಚೀನಾ ತಿಳಿಸಿದೆ.

ಅಕ್ಟೋಬರ್ 19ರಂದು ಸೋಮಾಲಿಯಾ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಈ ಹಡಗಿನಲ್ಲಿ 76,000 ಟನ್ ಕಲ್ಲಿದ್ದಲಿತ್ತು. ಆಫ್ರಿಕಾ ಶೃಂಗದ ಪೂರ್ವದಿಂದ, ಸೈಚೆಲ್ಲಾಸ್ ಈಶಾನ್ಯದಿಂದ 350 ನಾಟಿಕಲ್ ಮೈಲು ದೂರದಲ್ಲಿ ಹಾಗೂ ಸೋಮಾಲಿಯಾ ಪೂರ್ವದಿಂದ 700 ನಾಟಿಕಲ್ ಮೈಲು ದೂರದಿಂದ ಹಡಗನ್ನು ಅಪಹರಿಸಲಾಗಿತ್ತು.

ಗಲ್ಫ್ ಆಫ್ ಆಡೆನ್‌ನಲ್ಲಿ ಹಡಗುಗಳ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಪಡೆಗಳನ್ನು ನೇಮಕಗೊಳಿಸಿದ ಬಳಿಕ ಚೀನಾ ಹಡಗೊಂದು ಅಪಹರಣಕ್ಕೊಳಗಾಗುತ್ತಿರುವುದು ಇದೇ ಮೊದಲು. ಚೀನಾ ಇಲ್ಲಿ ಮೂರು ರಕ್ಷಣಾ ಹಡಗುಗಳನ್ನು ನಿಯೋಜಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ