ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸ್ಫೋಟ ಸಂಚು: ರಹಸ್ಯ ತಾಣದಲ್ಲಿ ಫಾರೂಕ್ ವಿಚಾರಣೆ (Nigeria | Washington | Amsterdam | Britain | FBI)
Bookmark and Share Feedback Print
 
ವಾಷಿಂಗ್ಟನ್: ಕ್ರಿಸ್‌ಮಸ್ ದಿನದಂದು ಅಮೆರಿಕದ ವಿಮಾನವನ್ನು ಸ್ಫೋಟಿಸಲು ಯತ್ನಿಸಿದ್ದ ನೈಜೀರಿಯನ್ ಬ್ಯಾಂಕರ್ ಪುತ್ರನಾದ ಉಮರ್ ಫಾರೂಕ್ ಅಬ್ದುಲ್‌ಮುತಾಲ್ಲಾಬ್‌ನನ್ನು ರಹಸ್ಯ ಸ್ಥಳದಲ್ಲಿ ಎಫ್‌ಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆಂದು ಮೂಲವೊಂದು ತಿಳಿಸಿದೆ.

ಶುಕ್ರವಾರ ಅಮ್‌ಸ್ಟರ್‌ಡ್ಯಾಮ್ ನಿಲ್ದಾಣದಿಂದ ಡೆಟ್ರಾಯಿಟ್‌ಗೆ ತೆರಳುತ್ತಿದ್ದ ಅಮೆರಿಕದ ವಿಮಾನವನ್ನು ಸ್ಫೋಟಿಸಲು ಪ್ರಯತ್ನಿಸಿದ್ದ ನೈಜೀರಿಯಾದ ಅಬ್ದುಲ್ ಮುದಲ್ಲಾಬ್ (23)ನನ್ನು ಬಂಧಿಸಿದ್ದರು. ಈತ ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕರ್ ಒಬ್ಬರ ಪುತ್ರ ಎಂಬುದಾಗಿಯೂ ಕೂಡ ಇದೀಗ ಬಹಿರಂಗವಾಗಿದೆ.

ತನ್ನನ್ನು ತಾನೇ ಸ್ಫೋಟಿಸಿಕೊಂಡು ವಿಮಾನ ಸ್ಫೋಟಕ್ಕೆ ಯತ್ನಿಸಿದ್ದರಿಂದ ಅಬ್ದುಲ್ ಮೈ-ಕೈ ಸುಟ್ಟುಹೋಗಿತ್ತು. ಚಿಕಿತ್ಸೆಗಾಗಿ ಅನ್ನಾ ಅರ್ಬೋರ್ ಮಿಚಿಗನ್ ಆಸ್ಪತ್ರೆಗೆ ದಾಖಲಾಗಿದ್ದ ಆತನನ್ನು ಭಾನುವಾರ ಬಿಡುಗಡೆಗೊಳಿಸಲಾಗಿತ್ತು. ವಿಚಾರಣೆಗಾಗಿ ಅಲ್ಲಿಂದ ಎಫ್‌ಬಿಐ ಅಧಿಕಾರಿಗಳು ಅಬ್ದುಲ್‌ನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ