ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಮಾರ್ಚ್‌ನಲ್ಲಿ ಭಾರತಕ್ಕೆ ನೆರ್ಪಾ ಜಲಾಂತರ್ಗಾಮಿ ಹಸ್ತಾಂತರ (Russia | India | Nerpa submarine | Nerpa Akula-II)
Bookmark and Share Feedback Print
 
ಮುಂದಿನ ವರ್ಷದ ಮಾರ್ಚ್ ತಿಂಗಳೊಳಗೆ ಭಾರತೀಯ ನೌಕಾದಳವು ನೂತನ ಪೀಳಿಗೆಯ ನೆರ್ಪಾ ಅಕುಲಾ-II ಪರಮಾಣು ದಾಳಿ ಸಾಮರ್ಥ್ಯ ಹೊಂದಿರುವ ಜಲಾಂತರ್ಗಾಮಿ ನೌಕೆಯನ್ನು ರಷ್ಯಾ ನೌಕಾಪಡೆಯಿಂದ ಪಡೆದುಕೊಳ್ಳಲಿದೆ.

10 ವರ್ಷಗಳ ಗುತ್ತಿಗೆ ಆಧಾರದಲ್ಲಿ ಭಾರತವು ಈ ಜಲಾಂತರ್ಗಾಮಿ ನೌಕೆಯನ್ನು ಪಡೆದುಕೊಳ್ಳುತ್ತಿದ್ದು, ಈ ಹಿಂದೆ ಅಂದಾಜು ಮಾಡಿದ್ದ ಹಸ್ತಾಂತರ ದಿನಕ್ಕೂ ಮೊದಲೇ ರಷ್ಯಾ ನೌಕೆಯನ್ನು ನೀಡಲಿದೆ ಎಂದು ವರದಿಗಳು ಹೇಳಿವೆ.

ನೆರ್ಪಾ ಜಲಾಂತರ್ಗಾಮಿಯನ್ನು ಇಂದು ಸಾಂಪ್ರದಾಯಿಕವಾಗಿ ರಷ್ಯಾ ನೌಕಾಪಡೆಗೆ ಸೇರಿಸಲಾಯಿತು. ಈ ಸಂದರ್ಭದಲ್ಲಿ ನೌಕೆ ಸೈಂಟ್ ಆಂಡ್ರ್ಯೂಸ್ ಧ್ವಜದೊಂದಿಗೆ ಮೇಳೈಸುತ್ತಿತ್ತು.

ಪ್ರಧಾನ ಮಂತ್ರಿ ವ್ಲಾದಿಮಿರ್ ಪುಟಿನ್ ಇದೇ ಪ್ರಾಂತ್ಯಕ್ಕೆ ಭೇಟಿ ನೀಡಿರುವುದು ಕುತೂಹಲ ಹುಟ್ಟಿಸಿದೆಯಾದರೂ, ನೌಕೆ ಸೇರ್ಪಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರೇ ಎಂಬ ಕುರಿತು ಯಾವುದೇ ಸ್ಪಷ್ಟತೆಗಳು ವರದಿಯಾಗಿಲ್ಲ.

ನೆರ್ಪಾ ಪರಮಾಣು ಚಾಲಿತ ಜಲಂತಾರ್ಗಾಮಿ ನೌಕೆಯನ್ನು ಇದಕ್ಕೂ ಮೊದಲೇ ಭಾರತ ಹಸ್ತಾಂತರಿಸಬೇಕಿತ್ತು. ಭಾರತವು ಎರಡು ಜಲಾಂತರ್ಗಾಮಿ ನೌಕೆಗಳಿಗೆ ಬೇಡಿಕೆ ಸಲ್ಲಿಸಿದ ಹಿನ್ನಲೆಯಲ್ಲಿ ನೌಕೆಗಳ ತಯಾರಿಯಲ್ಲಿ ತೊಡಗಿದ್ದ ರಷ್ಯಾ ಕೆಲವು ಎಡರುತೊಡರುಗಳನ್ನು ಎದುರಿಸಿತ್ತು. ಪರೀಕ್ಷಾರ್ಥ ಪ್ರಯೋಗ ಸಂದರ್ಭದಲ್ಲಿ ನೌಕೆಯೊಂದು ಅಪಘಾತಕ್ಕೀಡಾಗಿದ್ದ ವರದಿಗಳೂ 2008ರಲ್ಲಿ ಬಂದಿದ್ದವು.

ಇದೀಗ ಬಹುತೇಕ ಯಶಸ್ವಿ ಪ್ರಯೋಗಾರ್ಥ ಪರೀಕ್ಷೆ ಮುಗಿಸಿರುವ ನೌಕೆಯನ್ನು ಮಾರ್ಚ್ ತಿಂಗಳೊಳಗೆ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. 10 ವರ್ಷಗಳ ಗುತ್ತಿಗೆ ಆಧಾರದಲ್ಲಿ ಐಎನ್ಎಸ್ ಚಕ್ರ ಎಂಬ ಹೆಸರಿನಲ್ಲಿ ಭಾರತೀಯ ನೌಕಾದಳ ಸೇರಲಿರುವ ಈ ನೌಕೆಗೆ ಭಾರತ ಪಾವತಿಸಬೇಕಾದ ಮೊತ್ತ 650 ಮಿಲಿಯನ್ ಅಮೆರಿಕನ್ ಡಾಲರ್.
ಸಂಬಂಧಿತ ಮಾಹಿತಿ ಹುಡುಕಿ