ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 90ರ ದಶಕದಲ್ಲೇ ಉ.ಕೊರಿಯಾ ಜತೆ ಕೈ ಜೋಡಿಸಿತ್ತು ಪಾಕಿಸ್ತಾನ (Pakistan | North Korea | Nuke weapons | Abdul Qadeer Khan)
Bookmark and Share Feedback Print
 
ಯುರೇನಿಯಂ ಅಭಿವೃದ್ಧಿಪಡಿಸಲು ಅಗತ್ಯವಿದ್ದ ಅನಿಲವೊಂದರ ತಯಾರಿಕೆಗಾಗಿ ಸ್ಥಾವರವೊಂದನ್ನು ನಿರ್ಮಿಸುವ ಮೂಲಕ 1990ರ ದಶಕದಲ್ಲಿ ಪಾಕಿಸ್ತಾನದ ಸಹಾಯದೊಂದಿಗೆ ಉತ್ತರ ಕೊರಿಯಾ ಪರ್ಯಾಯವಾಗಿ ರಹಸ್ಯ ಅಣ್ವಸ್ತ್ರ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು ಎಂದು ವರದಿಯೊಂದು ಬಹಿರಂಗಪಡಿಸಿದೆ.

ಪಾಕಿಸ್ತಾನದ ಪರಮಾಣು ಪಿತಾಮಹ ಎಂದೇ ಖ್ಯಾತರಾಗಿರುವ ವಿವಾದಿತ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಮೂಲವನ್ನು ಉಲ್ಲೇಖಿಸಿರುವ 'ದಿ ವಾಷಿಂಗ್ಟನ್ ಪೋಸ್ಟ್' ಪತ್ರಿಕೆ ತನ್ನ ವರದಿಯಲ್ಲಿ ಉತ್ತರ ಕೊರಿಯಾ ಅಣ್ವಸ್ತ್ರ ಪಡೆದುಕೊಂಡಿರಬಹುದಾದ ರೀತಿಯನ್ನು ವಿವರಿಸಿದೆ.

ಅದರ ಪ್ರಕಾರ ಪಿಂಗ್ಯಾಂಗ್ (ಉತ್ತರ ಕೊರಿಯಾ ರಾಜಧಾನಿ) 2002ರ ಹೊತ್ತಿಗೆ ಸಣ್ಣ ಪ್ರಮಾಣದ ಯುರೇನಿಯಂ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿತ್ತು. ಅದು 3,000 ಅಥವಾ ಅದಕ್ಕಿಂತ ಹೆಚ್ಚು ಸೆಂಟಿಫ್ಯೂಜ್‌ಗಳಾಗಿದ್ದಿರಬಹುದು. ಇದಕ್ಕೆ ಅಗತ್ಯವಿದ್ದ ಪ್ರಮುಖ ಯಂತ್ರಗಳು, ವಿಧಾನಗಳು ಮತ್ತು ತಾಂತ್ರಿಕ ಸಲಹೆಯನ್ನು ಪಾಕಿಸ್ತಾನ ಪೂರೈಸಿರಬಹುದು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ಪ್ಲೂಟೋನಿಯಂ ಬಾಂಬ್ ತಯಾರಿಕೆಗಾಗಿ ಯುರೇನಿಯಂ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಕೊರಿಯಾಕ್ಕೆ ಖಾನ್ ನೀಡಿದ್ದ ಸಲಹೆಗಳು ಪೂರಕವಾಗಿದ್ದವು ಎಂದು ಅಮೆರಿಕಾ ಗುಪ್ತಚರ ಅಧಿಕಾರಿಯೊಬ್ಬರು ಹೇಳಿದ್ದಾರೆಂದು ಪೋಸ್ಟ್ ವರದಿ ಮಾಡಿದೆ.

ಅಲ್ಲದೆ ಎರಡೂ ಸರಕಾರಗಳ ನಡುವೆ ಗುಪ್ತ ಒಪ್ಪಂದವೊಂದು ನಿರ್ಮಾಣವಾಗಿತ್ತು. ಅದರ ಪ್ರಕಾರ ಪಾಕಿಸ್ತಾನವು ಸೆಂಟ್ರಿಫ್ಯೂಜ್ ಕಾರ್ಯಕ್ರಮಕ್ಕೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು ಹಾಗೂ ಇತ್ತ ಪಾಕಿಸ್ತಾನಕ್ಕೆ ಘೋರಿ ಅಣು ಸಿಡಿತಲೆ ಕ್ಷಿಪಣಿ ತಯಾರಿಸಲು ಸಹಕಾರ ನೀಡುವುದು ಪ್ರಮುಖವಾಗಿತ್ತು ಎಂದು ವರದಿಯಲ್ಲಿ ವಿವರಣೆ ನೀಡಲಾಗಿದೆ.

ಈ ಹಿಂದೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಉತ್ತರ ಕೊರಿಯಾಕ್ಕೆ ಭಾರೀ ರಹಸ್ಯವಾಗಿದ್ದ ಅಣು ಮಾಹಿತಿಗಳನ್ನು ಸೀಡಿಯೊಂದರಲ್ಲಿ ಹಸ್ತಾಂತರಿಸಿದ್ದರು; ಕಿಸೆಯಲ್ಲಿಟ್ಟುಕೊಂಡು ಅವರು ಅದನ್ನು ನೇರವಾಗಿ ಕೊರಿಯಾ ಕೈಗೆ ನೀಡಿದ್ದರು ಎಂದು ಅವರ ಆತ್ಮಚರಿತ್ರೆಯಲ್ಲಿ ಹೇಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ