ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಉತ್ತರ ಕೊರಿಯಾದಲ್ಲಿ ಅಮೆರಿಕ ಪ್ರಜೆ ಬಂಧನ (China | N Korea | American | Seoul | communist state)
Bookmark and Share Feedback Print
 
ಕಾನೂನು ಬಾಹಿರವಾಗಿ ದೇಶದೊಳಗೆ ಪ್ರವೇಶಿಸಿದ ಅಮೆರಿಕದ ವ್ಯಕ್ತಿಯೊಬ್ಬನನ್ನು ಉತ್ತರ ಕೊರಿಯಾ ಬಂಧಿಸಿರುವುದಾಗಿ ಮಾಧ್ಯಮವೊಂದರ ವರದಿ ತಿಳಿಸಿದೆ.

ಡಿಸೆಂಬರ್ 24ರಂದು ಡಿಪಿಆರ್‌ಕೆ-ಚೀನಾ ಗಡಿ ಮೂಲಕ ಅಕ್ರಮವಾಗಿ ಅಮೆರಿಕದ ಪ್ರಜೆಯೊಬ್ಬ ಪ್ರವೇಶಿಸಿದ್ದು, ಆತನನ್ನು ಬಂಧಿಸಿರುವುದಾಗಿ ಕೋರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ತನ್ನ ಒಂದು ಪ್ಯಾರಾದ ವರದಿಯಲ್ಲಿ ಉಲ್ಲೇಖಿಸಿದೆ.

ಬಂಧಿತನನ್ನು ರೋಬರ್ಟ್ ಪಾರ್ಕ್(28) ಎಂದು ಗುರುತಿಸಲಾಗಿದೆ. ಆತನನ್ನು ಉತ್ತರ ಕೊರಿಯಾ ತನಿಖಾಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಚೀನಾದ ಫ್ರೋಜನ್ ಟ್ಯೂಮೆನ್ ನದಿಯ ಮೂಲಕ ತಾನು ಉತ್ತರ ಕೊರಿಯಾ ಪ್ರವೇಶಿಸಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ. ಅಮೆರಿಕದ ಪ್ರಜೆಯಾಗಿರುವ ಪಾರ್ಕ್ ಕುಟುಂಬಿಕರು ಕೊರಿಯಾ ಮೂಲದವರೆನ್ನಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ