ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಫ್‌ಬಿಐಗೆ 2009ರಲ್ಲಿ ಸಿಕ್ಕಿದ ಎರಡನೇ ದೊಡ್ಡ ಮಿಕ ಹೆಡ್ಲಿ (FBI | LeT | David Coleman Headley | India)
Bookmark and Share Feedback Print
 
ಭಾರತದಲ್ಲಿ ಭಯೋತ್ಪಾದನಾ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಪಾಕಿಸ್ತಾನಿ ಸಂಜಾತ ಅಮೆರಿಕನ್ ಪ್ರಜೆ, ಲಷ್ಕರ್ ಇ ತೋಯ್ಬಾದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಬಂಧಿಸಿದ್ದು 2009ರಲ್ಲಿ ಎಫ್‌ಬಿಐ ಮಾಡಿದ ಎರಡನೇ ಅತಿ ದೊಡ್ಡ ಸಾಧನೆ ಎಂದು ಹೇಳಿಕೊಂಡಿದೆ.

2009ರಲ್ಲಿ ಅಮೆರಿಕಾದ ಎಫ್‌ಬಿಐ ಪತ್ತೆ ಹಚ್ಚಿದ ಅಗ್ರ 10 ಪ್ರಕರಣಗಳ ಪಟ್ಟಿಯಲ್ಲಿ ಹೆಡ್ಲಿ ಪ್ರಕರಣ ಎರಡನೇ ಸ್ಥಾನ ಪಡೆದುಕೊಂಡರೆ, ಅಮೆರಿಕಾದ ಇಬ್ಬರು ಯುವ ಉಗ್ರಗಾಮಿಗಳ ಬಂಧನ ಮೊದಲನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಭಯೋತ್ಪಾದಕರಿಂದ ಬರುತ್ತಿರುವ ಬೆದರಿಕೆಗಳು ವಾಸ್ತವ ಸಂಗತಿಗಳಾಗಿದ್ದು, ಎಗ್ಗಿಲ್ಲದೆ ಮುಂದುವರಿಯುತ್ತಿವೆ ಮತ್ತು ಹೊಸ ಅಪಾಯಕಾರಿ ಹಾದಿಗಳನ್ನು ಅವರು ಅನುಸರಿಸುತ್ತಿದ್ದಾರೆ. ಈ ವರ್ಷ ನಮಗೆ ಬಿಡುವಿಲ್ಲದ ವರ್ಷ. ಇಲ್ಲಿ ಪ್ರಮುಖವಾಗಿ ಕಂಡು ಬಂದ ಪ್ರಕರಣ ಇಬ್ಬರು ಅಮೆರಿಕನ್ ಪ್ರಜೆಗಳು ಜೆಹಾದಿಗಳಾಗಲು ವಿದೇಶಗಳಲ್ಲಿ ತರಬೇತಿ ಪಡೆಯಲು ಹೊರಟಿದ್ದು ಎಂದು ಎಫ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹೆಡ್ಲಿಯನ್ನು ಇದೇ ವರ್ಷದ ಅಕ್ಟೋಬರ್ ತಿಂಗಳಲ್ಲಿ ಆತನ ಶಾಲಾ ಸಹಪಾಠಿ ಹಾಗೂ ಗೆಳೆಯ ತಹಾವರ್ ಹುಸೇನ್ ರಾಣಾ ಜತೆ ಬಂಧಿಸಲಾಗಿತ್ತು. ಇವರಿಬ್ಬರು ಭಾರತ ಮತ್ತು ಡೆನ್ಮಾರ್ಕ್‌ಗಳಲ್ಲಿ ಕುಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಎಫ್‌ಬಿಐ ಆರೋಪಿಸಿದೆ.

ಹೆಡ್ಲಿ ಕಳೆದ ವರ್ಷದ ನವೆಂಬರ್ ಮುಂಬೈ ಉಗ್ರರ ದಾಳಿಯಲ್ಲೂ ಭಾಗವಹಿಸಿದ್ದಾನೆ ಎಂಬ ಆರೋಪವನ್ನು ಎಫ್‌ಬಿಐ ಇತ್ತೀಚೆಗೆ ಮಾಡಿದೆ. ಈ ದುರ್ಘಟನೆಯಲ್ಲಿ ಆರು ಅಮೆರಿಕನ್ ಪ್ರಜೆಗಳೂ ಸೇರಿದಂತೆ ಒಟ್ಟು 170ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.

ಪ್ರಮುಖ ಸ್ಥಳಗಳ ಪರಿಶೀಲನೆ ಮತ್ತು ಚಿತ್ರೀಕರಣಕ್ಕಾಗಿ ಹಲವು ಬಾರಿ ಹೆಡ್ಲಿ ಭಾರತ ಪ್ರವಾಸ ಮಾಡಿದ್ದ. ಈ ಸಂದರ್ಭದಲ್ಲಿ ತಾನೊಬ್ಬ ಉದ್ಯಮಿ ಎಂಬಂತೆ ನಡೆದುಕೊಳ್ಳುತ್ತಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿದ್ದು, ಆತನನ್ನು ಹಸ್ತಾಂತರಿಸುವಂತೆ ಭಾರತ ಅಮೆರಿಕಾವನ್ನು ಕೇಳಿಕೊಂಡಿದೆ. ಆದರೆ ಇತ್ತೀಚೆಗಷ್ಟೇ ಭಾರತದ ಮನವಿಯನ್ನು ಅಮೆರಿಕಾ ತಳ್ಳಿ ಹಾಕಿತ್ತು.
ಸಂಬಂಧಿತ ಮಾಹಿತಿ ಹುಡುಕಿ