ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ಮೇಲೆ ಮತ್ತಷ್ಟು ದಾಳಿ ಸಾಧ್ಯತೆ: ಉಮರ್ ಹೇಳಿಕೆ (Nigeria | FBI | Umar Farouk Abdulmutallab | al Qaida | America)
Bookmark and Share Feedback Print
 
ಅಮೆರಿಕದ ವಿರುದ್ಧ ಮತ್ತಷ್ಟು ದಾಳಿ ನಡೆಸಲು ಬಾಂಬರ್‌ಗಳು ಸಜ್ಜಾಗಿದ್ದಾರೆಂದು ಇತ್ತೀಚೆಗಷ್ಟೇ ಅಮೆರಿಕ ವಿಮಾನವನ್ನು ಸ್ಫೋಟಿಸಲು ವಿಫಲ ಯತ್ನ ನಡೆಸಿದ್ದ ಶಂಕಿತ ಅಲ್ ಖಾಯಿದಾ ಉಗ್ರ ಎಫ್‌ಬಿಐ ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ.

ಅಮೆರಿಕದಲ್ಲಿ ಮತ್ತಷ್ಟು ಉಗ್ರರ ದಾಳಿ ನಡೆಯುವ ಸಂಭವಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಎಫ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ಮೇಲೆ ಇಂತಹದ್ದೇ ರೀತಿಯ ದಾಳಿ ನಡೆಯುವ ಸಂಭವ ಇದೆ ಎಂದು ಸೆರೆ ಸಿಕ್ಕ ಉಮರ್ ಅಬ್ದುಲ್‌ಮುತ್ತಾಲ್ಲಾಬ್ ಎಫ್‌ಬಿಐ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಎಬಿಸಿ ನ್ಯೂಸ್ ವರದಿ ಹೇಳಿದೆ.

'ದೇವರ ಶತ್ರುಗಳ ವಿರುದ್ಧ ನಾವು ಬಾಂಬ್ ದಾಳಿಯನ್ನು ಮುಂದುವರಿಸುವುದಾಗಿ' ಯೆಮೆನ್‌ನ ಅಲ್ ಖಾಯಿದಾ ಮುಖಂಡರು ಬಿಡುಗಡೆ ಮಾಡಿರುವ ನೂತನ ವೀಡಿಯೋ ಟೇಪ್‌ವೊಂದರಲ್ಲಿ ಎಚ್ಚರಿಕೆ ಕೂಡ ನೀಡಿದ್ದಾರೆ.

ಉಮರ್ ಫಾರೂಕ್ ಅಮೆರಿಕದ ವಿಮಾನವನ್ನು ತನ್ನನ್ನು ತಾನೇ ಸ್ಫೋಟಿಸಿಕೊಂಡು ಧ್ವಂಸಗೊಳಿಸಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಎಫ್‌ಬಿಐಗೆ ಸೆರೆ ಸಿಕ್ಕಿದ್ದ. ಈತ ನೈಜೀರಿಯಾದ ಪ್ರತಿಷ್ಠಿತ ಬ್ಯಾಂಕರ್‌ವೊಬ್ಬರ ಪುತ್ರನಾಗಿದ್ದ. ಇದೀಗ ಬಂಧಿತ ಉಮರ್‌ನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ