ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಡ್ರಗ್ಸ್ ಸಾಗಾಟ: ಬ್ರಿಟನ್ ಪ್ರಜೆಯನ್ನು ಗಲ್ಲಿಗೇರಿಸಿದ ಚೀನಾ (China | Akmal Shaikh | Urumqi | drugs | execute | Gordon Brown)
Bookmark and Share Feedback Print
 
ಮಾದಕ ಪದಾರ್ಥವಾದ ಹೆರಾಯಿನ್ ಅನ್ನು ಸಾಗಿಸುತ್ತಿದ್ದ ವೇಳೆ ಸೆರೆ ಸಿಕ್ಕ ಬ್ರಿಟನ್ ಪ್ರಜೆಯೊಬ್ಬನನ್ನು ಚೀನಾ ಮಂಗಳವಾರ ನೇಣುಗಂಬಕ್ಕೆ ಏರಿಸಿರುವುದಾಗಿ ಬ್ರಿಟನ್ ವಿದೇಶಾಂಗ ಸಚಿವಾಲಯ ತಿಳಿಸಿದ್ದು, ಇದನ್ನು ಬ್ರಿಟನ್ ಪ್ರಧಾನಿ ಗೋರ್ಡನ್ ಬ್ರೌನ್ ತೀವ್ರವಾಗಿ ಖಂಡಿಸಿದ್ದಾರೆ.

ಸೆರೆಸಿಕ್ಕ ಬ್ರಿಟನ್ ಪ್ರಜೆ ಅಕ್ಮಲ್ ಶೇಕ್‌ ಅಸ್ವಸ್ಥತೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕ್ಷಮಾದಾನ ನೀಡುವಂತೆ ಆತನ ಕುಟುಂಬ ವರ್ಗ ಮತ್ತು ಬ್ರಿಟನ್ ಸರ್ಕಾರ ಚೀನಾಕ್ಕೆ ಮನವಿ ಮಾಡಿಕೊಂಡಿತ್ತು. ಆದರೆ ಶೇಕ್ ಕ್ಷಮಾದಾನ ಮನವಿಯನ್ನು ಚೀನಾ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಅಕ್ಮಲ್ ಶೇಕ್‌ನನ್ನು ಗಲ್ಲಿಗೇರಿಸಿರುವ ಚೀನಾದ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ಬ್ರೌನ್, ತಾವು ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡರು ಕೂಡ ಚೀನಾ ಅದನ್ನು ಪರಿಗಣಿಸದೆ ನೇಣುಗಂಬಕ್ಕೆ ಏರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ಪಶ್ಚಿಮ ನಗರವಾದ ಉರುಮ್‌ಕ್ವಿಯಲ್ಲಿ ಸಾರ್ವಜನಿಕವಾಗಿಯೇ ಶೇಕ್‌ನನ್ನು ನೇಣಿಗೇರಿಸಲಾಯಿತು ಎಂದು ಚೀನಾದ ಅಧಿಕಾರಿಗಳು ಖಚಿತಪಡಿಸಿದ್ದಾರೆ.

'ಶೇಕ್‌ಗೆ ಕ್ಷಮಾದಾನ ನೀಡುವಂತೆ ಚೀನಾದ ಅಧಿಕಾರಿಗಳನ್ನು ಪರಿ,ಪರಿಯಾಗಿ ಬೇಡಿಕೊಂಡೆವು, ಆತನಿಗೆ ಕ್ಷಮಾದಾನ ನೀಡಿದಲ್ಲಿ ಭಗ್ನಗೊಂಡ ಕುಟುಂಬದ ಹೃದಯಗಳಿಗೆ ಸಹಾಯಕವಾಗುತ್ತದೆ' ಎಂದು ಮನವರಿಕೆ ಮಾಡಿಕೊಟ್ಟಿದ್ದೆವು ಎಂದು ಆತನ ಸಹೋದರ ಸೂಹೈಲ್ ಶೇಕ್ ಸೋಮವಾರ ರಾತ್ರಿ ಬೀಜಿಂಗ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದರು. ಆದರೆ ಅದ್ಯಾವುದನ್ನೂ ಲೆಕ್ಕಿಸದ ಚೀನಾ ಶೇಕ್‌ನನ್ನು ಗಲ್ಲಿಗೇರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ