ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ವಿದೇಶಿ ಪಡೆ: ನಾಗರಿಕರ ಹತ್ಯೆ ಗಂಭೀರವಾಗಿ ಗಣನೆಗೆ: ಅಫ್ಘಾನ್ (Taliban | Afghanistan | Hamid Karzai | Kabul,)
Bookmark and Share Feedback Print
 
ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಉದ್ರಿಕ್ತ ವಾತಾವರಣ ಸಂಭವಿಸದ ವೇಳೆಯಲ್ಲಿ ಅಂತಾರಾಷ್ಟ್ರೀಯ ಪಡೆಯಿಂದ 8ವಿದ್ಯಾರ್ಥಿಗಳು ಸೇರಿದಂತೆ ಹತ್ತು ಮಂದಿ ನಾಗರಿಕರು ಬಲಿಯಾದ ಘಟನೆ ಕುರಿತು ತನಿಖೆ ನಡೆಸುವಂತೆ ಅಫ್ಘಾನ್ ಅಧ್ಯಕ್ಷ ಹಮೀದ್ ಕರ್ಜೈಯ್ ಸರ್ಕಾರಿ ನಿಯೋಗವೊಂದನ್ನು ಕಳುಹಿಸಿದ್ದಾರೆ.

ಉತ್ತರ ಭಾಗದ ನಾರಾಂಗ್ ಜಿಲ್ಲೆಯ ಕುನಾರ್ ಪ್ರದೇಶದಲ್ಲಿ ನಡೆದ ಈ ಕ್ರೂರ ಕೃತ್ಯವನ್ನು ಕರ್ಜೈಯ್ ತೀವ್ರವಾಗಿ ಖಂಡಿಸಿದ್ದಾರೆ.ಕಳೆದ ಆರು ತಿಂಗಳಲ್ಲಿ ಪಾಶ್ಚಾತ್ಯ ದೇಶಗಳ ಭದ್ರತಾ ಪಡೆಯಿಂದ ಅಫ್ಘಾನ್ ನಾಗರಿಕರು ಸಾವನ್ನಪ್ಪುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ವಿದೇಶಿ ಪಡೆಗಳು ನಾಗರಿಕರನ್ನು ಬಲಿ ತೆಗೆದುಕೊಳ್ಳುತ್ತಿರುವುದು ಅತ್ಯಂತ ಸೂಕ್ಷ್ಮವಾದ ವಿಚಾರವಾಗಿದೆ, ಅದರಲ್ಲೂ ತಾಲಿಬಾನ್ ಉಗ್ರರಿಂದಲೂ ಬಹಳಷ್ಟು ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ.

ಅಫ್ಘಾನ್ ಭದ್ರತಾ ಪಡೆಯೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಮಂಗಳವಾರ ನ್ಯಾಟೋ ತಿಳಿಸಿದ್ದು, ಅಲ್ಲದೇ ನಾಗರಿಕರ ಸಾವಿನ ಕುರಿತು ಆರೋಪದ ಬಗ್ಗೆ ಗಮನ ಹರಿಸಿರುವುದಾಗಿ ಹೇಳಿದೆ. ಆದರೆ ಆ ಘಟನೆ ನಡೆದ ವೇಳೆ ನಾರಾಂಗ್ ಜಿಲ್ಲೆಯಲ್ಲಿ ತಾವು ಯಾವುದೇ ಕಾರ್ಯಾಚರಣೆ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ