ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಸೋನಿಯಾ, ಮಾಯಾವತಿ ಜತೆ ಸ್ಥಾನ ಗಿಟ್ಟಿಸಿದ ಲಾಡೆನ್! (Osama bin Laden | Congress | Sonia Gandhi | Mayawati)
Bookmark and Share Feedback Print
 
ಬ್ರಿಟೀಷ್ ಪತ್ರಿಕೆ 'ಫಿನಾನ್ಶಿಯಲ್ ಟೈಮ್ಸ್' ಪ್ರಕಟಿಸಿರುವ 'ದಶಕಕ್ಕೆ ರೂಪ ಕೊಟ್ಟ 50 ಮಂದಿ' ಪಟ್ಟಿಯಲ್ಲಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಗುರುತಿಸಿಕೊಂಡಿದ್ದು, ಇದೇ ಪಟ್ಟಿಯಲ್ಲಿ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಕೂಡ ಕಾಣಿಸಿಕೊಂಡಿದ್ದಾನೆ.

ಲಂಡನ್‌ನ ಉದ್ಯಮ ಪತ್ರಿಕೆ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಅನಿವಾಸಿ ಭಾರತೀಯ ಬಿಲಿಯನ್‌ಪತಿ ಲಕ್ಷ್ಮಿ ಮಿತ್ತಲ್ ಮತ್ತು ಭಾರತೀಯ ಸಂಜಾತೆ ಪೆಪ್ಸಿಕೋ ಮುಖ್ಯಸ್ಥೆ ಇಂದ್ರಾ ನೂಯಿ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಪಡೆದುಕೊಂಡಿರುವುದು ವಿಶೇಷ.

ದಶಕವನ್ನು ರೂಪಿಸಿದ 50 ಮಂದಿಯಲ್ಲಿ ಆಲ್ ಖೈದಾ ಮುಖ್ಯಸ್ಥ ಲಾಡೆನ್ ಮತ್ತು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಈ 50 ಮಂದಿಯ ಪಟ್ಟಿಯ ಬಗ್ಗೆ ಪತ್ರಿಕೆ ವಿವರಣೆ ನೀಡುತ್ತಾ, 'ಇಲ್ಲಿ ಸ್ಥಾನ ಪಡೆದಿರುವವರೆಲ್ಲ ಹೀರೋಗಳಲ್ಲ. ಕೆಲವರು ಖಳರೂ ಇದ್ದಾರೆ' ಎಂದಿದೆ.

ಹೂಡಿಕೆದಾರ ದಂತಕತೆ ವಾರೆನ್ ಬಫೆಟ್, ಆಪಲ್ ಮುಖ್ಯಸ್ಥ ಸ್ಟೀವ್ ಜಾಬ್ಸ್, ಗಾಲ್ಫ್ ಆಟಗಾರ ಟೈಗರ್ ವುಡ್ಸ್, ಬಿಲ್ & ಮೆಲಿಂದಾ ಗೇಟ್ಸ್ ಫೌಂಡೇಶನ್ಸ್ ಸಹಾಧ್ಯಕ್ಷೆ ಮೆಲಿಂದಾ ಗೇಟ್ಸ್ ಮತ್ತು ಚೀನಾ ಅಧ್ಯಕ್ಷ ಹೂ ಜಿಂಟಾವೋ ಸೇರಿದಂತೆ ರಾಜಕೀಯ ಮತ್ತು ಉದ್ಯಮಗಳ ನಡುವೆ ರಂಗಗಳನ್ನು ಬದಲಾಯಿಸಿದವರು ಇಲ್ಲಿದ್ದಾರೆ.

ಇಲ್ಲಿ ಕಾಣಿಸಿಕೊಂಡಿರುವ ಪುರುಷ ಮತ್ತು ಮಹಿಳೆಯರು ಈ ದಶಕವನ್ನು ರೂಪಿಸಿದ ಪ್ರತಿನಿಧಿಗಳಾಗಿದ್ದಾರೆ. ಇಲ್ಲೂ ಕೆಲವು ಪ್ರಮುಖರನ್ನು ನಾವು ಪರಿಗಣಿಸಿಲ್ಲ. ಅದಕ್ಕಿರುವ ಕಾರಣ ಅಂತಹ ಐತಿಹಾಸಿಕ ಕಾರ್ಯ ಅಥವಾ ಸಾಧನೆಯನ್ನು ಬೇರೆ ಯಾರೋ ಮಾಡಿ ನಮ್ಮ ಪಟ್ಟಿಯಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿರುವುದು ಎಂದು ಪತ್ರಿಕೆ ವಿವರಣೆ ನೀಡಿದೆ.

ಸೋನಿಯಾ ಗಾಂಧಿ ಬಗ್ಗೆ ಬರೆದಿರುವ ಪತ್ರಿಕೆ, ಆಕೆ ಕಾಂಗ್ರೆಸ್ ಪಕ್ಷವನ್ನು 1998ರಲ್ಲಿ ಸುಪರ್ದಿಗೆ ತೆಗೆದುಕೊಂಡು ಭಾರತದ ಬಹುದೊಡ್ಡ ರಾಜಕೀಯ ಪಕ್ಷವಾಗಿ ಮರು ಸಂಘಟಿಸಿದವರು ಎಂದಿದೆ.

ಮಾಯಾವತಿ ದಲಿತರ ರಾಣಿಯಾಗಿ ಮೆರೆದವರು, ದಿಟ್ಟವಾಗಿ ವಿರೋಧಗಳನ್ನು ಎದುರಿಸಿ ಉತ್ತರ ಪ್ರದೇಶದಲ್ಲಿ ಅಸ್ಪಶ್ಯತೆಯನ್ನು ಕಡಿಮೆ ಮಾಡಿದವರು ಎಂದು ಪತ್ರಿಕೆ ಶ್ಲಾಘಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ