ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಲ್ ಖಾಯಿದಾ ಹುಟ್ಟಡಗಿಸುವುದೇ ನಮ್ಮ ಗುರಿ: ಒಬಾಮ (al Qaeda | Obama | Washington | Umar Farouk | US)
Bookmark and Share Feedback Print
 
ND
ಜಾಗತಿಕ ವಿಧ್ವಂಸಕ ಕೃತ್ಯ ನಡೆಸುತ್ತಿರುವ ಅಲ್ ಖಾಯಿದಾ ಉಗ್ರಗಾಮಿ ಸಂಘಟನೆಯನ್ನು ಮಟ್ಟಹಾಕುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶಪಥ ತೊಟ್ಟಿದ್ದಾರೆ.

ಅಮೆರಿಕದ ಮೇಲೆ ದಾಳಿ ನಡೆಸಲು ಜಗತ್ತಿನ ಯಾವುದೇ ಭಾಗದಲ್ಲಿ ಅವರು ಸಂಚು ಹೂಡಿದರೂ ಅವರನ್ನು ಸದೆಬಡಿಯಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಕ್ರಿಸ್‌ಮಸ್ ದಿನ ಅಮೆರಿಕದ ವಿಮಾನ ಸ್ಫೋಟಿಸಲು ನಡೆಸಿದ ಯತ್ನದ ಬಗ್ಗೆ ಪೂರ್ಣ ಪ್ರಮಾಣದ ಬಗ್ಗೆ ತನಿಖೆ ನಡೆಯುತ್ತಿದೆ. ಇಂತಹ ದುಷ್ಕೃತ್ಯಗಳ ಹಿಂದೆ ಇರುವ ಎಲ್ಲಾ ವ್ಯಕ್ತಿಗಳನ್ನು ಪತ್ತೆ ಹಚ್ಚುವ ತನಕ ಹಾಗೂ ತಪ್ಪನ್ನು ಸಾಬೀತುಪಡಿಸುವವರೆಗೂ ನಾವು ವಿರಮಿಸುವುದಿಲ್ಲ ಎಂದು ಹವಾಯಿಗೆ ತೆರಳಿರುವ ಒಬಾಮ ಅಲ್ಲಿಂದಲೇ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಭಾಷಣದಲ್ಲಿ ತಿಳಿಸಿದ್ದಾರೆ.

ಉಗ್ರನ ಸಂಚು ಸಫಲವಾಗುತ್ತಿದ್ದರೆ ವಿಮಾನದೊಳಗಿದ್ದ ಮುಗ್ಗರೆಲ್ಲ ಸಾಯುತ್ತಿದ್ದರು. ನಮಗೆ ಬೆದರಿಕೆ ಒಡ್ಡಿರುವ ಪ್ರತಿಯೊಂದು ದುಷ್ಟ ಶಕ್ತಿಯನ್ನೂ ನಾವು ಛಿದ್ರಗೊಳಿಸುವುದು ನಿಶ್ಚಿತ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ