ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌ ನಾಗರಿಕರ ರಹಸ್ಯ ಕಣ್ಮರೆಗೆ 'ಬ್ಲ್ಯಾಕ್‌ವಾಟರ್' ಕಾರಣ? (Pakistan | Blackwater | Khalid Khwaja | al-Qaida | ISI)
Bookmark and Share Feedback Print
 
ಅಮೆರಿಕದ ವಿವಾದಿತ ಖಾಸಗಿ ಭದ್ರತಾ ಸಂಸ್ಥೆ ಬ್ಲ್ಯಾಕ್ ವಾಟರ್ ಸಂಸ್ಥೆ ಪಾಕಿಸ್ತಾನದೊಳಗೆ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದು, ನಾಗರಿಕರ ಕಣ್ಮರೆಗೆ ಇದೇ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಐಎಸ್‌ಐ ನಿವೃತ್ತ ಅಧಿಕಾರಿಯೊಬ್ಬರು ಗಂಭೀರವಾಗಿ ಆಪಾದಿಸಿದ್ದಾರೆ.

ಈ ಸಂಸ್ಥೆಯ ಪಾಕ್‌ನ ಸೇನಾ ಅಧಿಕಾರಿಗಳು ಹಾಗೂ ತನಿಖಾ ಸಂಸ್ಥೆಗಳ ನಿವೃತ್ತ ನೌಕರರಿಗೆ ಭಾರೀ ಸಂಬಳದ ಆಮೀಷವೊಡ್ಡಿ ತನ್ನ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ ಎಂದು ಐಎಸ್‌ಐನ ನಿವೃತ್ತ ಅಧಿಕಾರಿ ಖಾಲಿದಾ ಖ್ವಾಜಾ ದೂರಿದ್ದಾರೆ. ದೇಶದಲ್ಲಿ ಕಣ್ಮರೆಯಾಗುತ್ತಿರುವ ಪಾಕಿಸ್ತಾನಿ ನಾಗರಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಇವರ ಪರವಾಗಿ ಖ್ವಾಜಾ ಆರೋಪ ಎತ್ತಿದ್ದಾರೆ.

ಕಣ್ಮರೆಯಾಗಿರುವ ನಾಗರಿಕರನ್ನು ಪಾಕ್ ಭದ್ರತಾ ಸಂಸ್ಥೆಗಳು ವಿಚಾರಣೆ ಇಲ್ಲದೆ ಬಂಧಿಸಿರುವ ಗುಮಾನಿ ಇದೆ. ತಾಲಿಬಾನ್ ಅಥವಾ ಅಲ್ ಖಾಯಿದಾ ಜೊತೆ ಸಂಬಂಧ ಹೊಂದಿದವರನ್ನು ಹೆಕ್ಕಿ ತರುವಂತೆ ಬ್ಲ್ಯಾಕ್ ವಾಟರ್ ತನ್ನ ಸಂಸ್ಥೆಯ ಸಿಬ್ಬಂದಿಗೆ ಸೂಚಿಸುತ್ತಿದೆ. ಆ ನಿಟ್ಟಿನಲ್ಲಿ ದೇಶದಲ್ಲಿ ಕಣ್ಮರೆಯಾಗಿರುವ ಸುಮಾರು ಒಂದು ಸಾವಿರ ನಾಗರಿಕರನ್ನು ಹಾಜರುಪಡಿಸುವಂತೆ ಪಾಕ್ ಸುಪ್ರೀಂಕೋರ್ಟ್ ಪಾಕಿಸ್ತಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ