ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಇರಾಕ್: ಅವಳಿ ಬಾಂಬ್ ಸ್ಫೋಟ-ಗವರ್ನರ್ ಪಾರು (Qassim Mohammed | Suicide blast | Iraq | governor | Baghdad)
Bookmark and Share Feedback Print
 
ಪಶ್ಛಿಮ ಇರಾಕ್ ನಗರದಲ್ಲಿ ಬುಧವಾರ ಸಂಭವಿಸಿದ ಅವಳಿ ಆತ್ಮಹತ್ಯಾ ಬಾಂಬರ್ ದಾಳಿಯಿಂದಾಗಿ ಪ್ರಾಂತ್ಯೀಯ ರಾಜ್ಯಪಾಲರೊಬ್ಬರು ಗಾಯಗೊಂಡಿದ್ದು, 10ಮಂದಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಬಾಗ್ದಾದ್‌ನಿಂದ 60ಕಿ.ಮೀ.ದೂರದಲ್ಲಿರುವ ನಗರವಾದ ರಾಮಾದಿಯಲ್ಲಿ ನಡೆದ ಅವಳಿ ಬಾಂಬರ್ ದಾಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 40ಮಂದಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಅನ್ಬಾರ್ ಪ್ರಾಂತೀಯ ಗವರ್ನರ್ ಆದ ಖಾಸೀಮ್ ಮೊಹಮ್ಮದ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಾವಿನ ಪ್ರಮಾಣ ಖಚಿತವಾಗಿ ತಿಳಿದುಬಂದಿಲ್ಲ ಎಂದಿರುವ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ