ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕನ್ ವಿಮಾನ ಸ್ಫೋಟಕ್ಕೆ ಯೆಮನ್‌ನಲ್ಲಿ ಅಲ್‌ಖೈದಾ ತರಬೇತಿ (US airline | al Qaeda | London | Nigerian)
Bookmark and Share Feedback Print
 
ಅಮೆರಿಕಾದ ವಿಮಾನವನ್ನು ಡೆಟ್ರಾಯಿಟ್ ವಿಮಾನ ನಿಲ್ದಾಣ ಸಮೀಪಿಸುವಾಗ ಸ್ಫೋಟಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿತನಾಗಿರುವ 23ರ ಹರೆಯದ ನೈಜೀರಿಯಾ ಪ್ರಜೆಯನ್ನು ಅಲ್‌ಖೈದಾ ಯೆಮನ್‌ನಲ್ಲಿ ತರಬೇತಿ ನೀಡಿದ ಬಳಿಕ ಲಂಡನ್‌ನಲ್ಲಿ ದುಷ್ಕೃತ್ಯ ನಡೆಸಲು ನೇಮಿಸಿತ್ತು ಎಂದು ಬ್ರಿಟೀಷ್ ಪತ್ರಿಕೆಯೊಂದು ವರದಿ ಮಾಡಿದೆ.

ಇದೀಗ ಬಂಧಿತನಾಗಿರುವ ಉಮರ್ ಫಾರೂಕ್ ಅಬ್ದುಲ್ ಮುತಾಲಬ್ ಬೆಳೆದು ಬಂದ ರೀತಿಯನ್ನು ಭದ್ರತಾ ಮೂಲಗಳನ್ನು ಉಲ್ಲೇಖಿಸಿ 'ದಿ ಟೈಮ್ಸ್' ಪತ್ರಿಕೆ ವರದಿ ಮಾಡಿದೆ.

ಲಂಡನ್ ಯುನಿವರ್ಸಿಟಿ ಕಾಲೇಜಿನ ಇಸ್ಲಾಮಿಕ್ ಸೊಸೈಟಿ ಮಾಜಿ ಅಧ್ಯಕ್ಷನಾಗಿರುವ ಉಮರ್‌ರನ್ನು ಲಂಡನ್‌ನ ಅಲ್‌ಖೈದಾ ಉಗ್ರಗಾಮಿ ಜಾಲಕ್ಕೆ ಒಸಾಮಾ ಬಿನ್ ಲಾಡೆನ್ ನೇಮಿಸಿದ್ದ ಎಂದು ಪತ್ರಿಕೆ ತಿಳಿಸಿದೆ.

ಭಯೋತ್ಪಾದನೆಯನ್ನು ಮಟ್ಟ ಹಾಕಲು ಗ್ವಾಂಟನಾಮೋದಲ್ಲಿ ಅಮೆರಿಕಾ ನಿರ್ಮಿಸಿರುವ ಬಂಧಿಖಾನೆಯಲ್ಲಿ ಅಪರಾಧಿಗಳಿಗೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು 2007ರಲ್ಲಿ ಉಮರ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಚರ್ಚಿಸಿದ್ದ ಎಂದು ಹೇಳಲಾಗಿದೆ.

ಅದೇ ಹೊತ್ತಿಗೆ ಕಳೆದ ಮೂರು ವರ್ಷಗಳಲ್ಲಿ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡ ಲಂಡನ್ ಇಸ್ಲಾಮಿಕ್ ಯುನಿವರ್ಸಿಟಿಯ ನಾಲ್ಕನೇ ಅಧ್ಯಕ್ಷ ಉಮರ್ ಎಂಬ ಕುತೂಹಲಕಾರಿ ವಿಚಾರವೂ ಬಹಿರಂಗವಾಗಿದೆ.

ಅವರಲ್ಲೊಬ್ಬ ಆರೋಪಿ 2006ರಲ್ಲಿ ವಿಮಾನಗಳಲ್ಲಿ ದ್ರವೀಕೃತ ಬಾಂಬ್ ಸ್ಫೋಟಿಸಲು ಯತ್ನಿಸಿದ ಆರೋಪದ ಮೇಲೆ ಮರು ವಿಚಾರಣೆಗೊಳಗಾತ್ತಿದ್ದಾನೆ. ಮತ್ತಿಬ್ಬರು 2007ರಿಂದೀಚಿಗೆ ಉಗ್ರಗಾಮಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದರು ಎಂದು ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ