ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಕರಾಚಿ ಸ್ಫೋಟಕ್ಕೆ ನಾವೇ ಹೊಣೆ: ಪಾಕ್ ತಾಲಿಬಾನ್ (Asif Ali Zardari | Pakistan | Taliban | Karachi | bombing)
Bookmark and Share Feedback Print
 
ವಾಣಿಜ್ಯ ನಗರಿ ಕರಾಚಿಯಲ್ಲಿ ಸಂಭವಿಸಿದ ಆತ್ಮಹತ್ಯಾ ಬಾಂಬ್ ದಾಳಿಗೆ ತಾವೇ ಹೊಣೆಗಾರರು ಎಂದು ಪಾಕಿಸ್ತಾನ್ ತಾಲಿಬಾನ್ ಬುಧವಾರ ಹೇಳಿಕೆ ನೀಡಿದ್ದು, ಮುಂದಿನ ಹತ್ತು ದಿನದೊಳಗೆ ಮತ್ತೆ ದಾಳಿ ನಡೆಸುವುದಾಗಿ ಎಚ್ಚರಿಕೆ ಕೂಡ ನೀಡಿದೆ.

'ಕರಾಚಿ ಬಾಂಬ್ ದಾಳಿ ಹೊಣೆಯನ್ನು ನಮ್ಮ ಸಂಘಟನೆಯೇ ಹೊತ್ತುಕೊಳ್ಳುತ್ತದೆ ಮತ್ತು ನಾವು ಮತ್ತೆ ಹತ್ತು ದಿನದೊಳಗೆ ಅಂತಹದೇ ದಾಳಿಯನ್ನು ನಡೆಸುವುದಾಗಿ' ತೇಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಅಥವಾ ಪಾಕಿಸ್ತಾನ್ ತಾಲಿಬಾನ್ ಚಳವಳಿಯ ಕಮಾಂಡರ್‌ಗಳಲ್ಲಿ ಒಬ್ಬನಾದ ಅಸ್ಮತುಲ್ಲಾ ಶಾಹೀನ್ ಎಚ್ಚರಿಕೆ ನೀಡಿದ್ದಾನೆ.

ಶಿಯಾ ಪಂಗಡದವರ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿ ನಡೆಸಿದ ಪರಿಣಾಮ 43ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು.

ಪಾಕಿಸ್ತಾನದಲ್ಲಿ ಇತ್ತೀಚೆಗೆ ತಾಲಿಬಾನ್ ಉಗ್ರರ ಅಟ್ಟಹಾಸ ಮಿತಿಮೀರುತ್ತಿದ್ದು, ನೂರಾರು ಅಮಾಯಕ ನಾಗರಿಕರು ಬಲಿಯಾಗಿದ್ದರು. ತಮ್ಮ ವಿರುದ್ಧ ಪಾಕ್ ಮತ್ತು ಅಮೆರಿಕ ಮಿಲಿಟರಿ ಪಡೆ ನಡೆಸುತ್ತಿರುವ ಕಾರ್ಯಾಚರಣೆ ನಿಲ್ಲಿಸದಿದ್ದರೆ ಅದಕ್ಕೆ ತಕ್ಕ ಪ್ರತಿಕಾರ ನೀಡುವುದಾಗಿ ತಾಲಿಬಾನ್ ಘೋಷಿಸುತ್ತಲೇ ಬಂದಿದೆ.
ಸಂಬಂಧಿತ ಮಾಹಿತಿ ಹುಡುಕಿ