ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕಾದಲ್ಲಿ ಬರಲಿದೆ ಮದರ್ ಥೆರೇಸಾ ಅಂಚೆ ಚೀಟಿ (Mother Teresa | India | Nobel peace prize winner | US)
Bookmark and Share Feedback Print
 
ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಭಾರತದ ಮದರ್ ಥೆರೇಸಾ ಹುಟ್ಟುಹಬ್ಬ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಅಂಚೆ ಚೀಟಿಯನ್ನು ಹೊರತರುವ ನಿರ್ಧಾರಕ್ಕೆ ಅಮೆರಿಕಾ ಬಂದಿದೆ. ಜನಪ್ರಿಯ ಅಮೆರಿಕನ್ ಕಲಾವಿದ ಥಾಮಸ್ ಬ್ಲಾಕ್‌ಶೀರ್ ಅವರು ಅಂಚೆ ಚೀಟಿಗಾಗಿ ಥೆರೇಸಾ ವರ್ಣಚಿತ್ರವನ್ನು ಬಿಡಿಸಲಿದ್ದಾರೆ.

ಮಾನವೀಯ ಸೇವೆಗಾಗಿ 1979ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಿದ್ದ ಮದರ್ ಥೆರೇಸಾ ಅವರನ್ನು ಅಮೆರಿಕಾ ಅಂಚೆ ಸೇವಾ ವಿಭಾಗವು ಅಂಚೆ ಚೀಟಿಯನ್ನು ಹೊರತರುವ ಮೂಲಕ ಗೌರವಿಸಲಿದೆ ಎಂದು ಅಮೆರಿಕಾ ಪೋಸ್ಟಲ್ ಸರ್ವಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

2010ರಲ್ಲಿ ಅಮೆರಿಕಾ ಅಂಚೆ ಇಲಾಖೆಯು ಪ್ರಕಟಿಸಲಿರುವ ನೂತನ ಅಂಚೆ ಚೀಟಿಗಳ ವಿವರಗಳನ್ನು ಕೂಡ ಇದೇ ಸಂದರ್ಭದಲ್ಲಿ ನೀಡಲಾಗಿದೆ.

ಬಡವರು ಮತ್ತು ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿದ್ದವರ ಏಳ್ಗೆಗಾಗಿ ಶ್ರಮಿಸಿದ ರೋಮನ್ ಕ್ಯಾಥಲಿಕ್ ಕ್ರೈಸ್ತ ಸನ್ಯಾಸಿನಿ ಹಾಗೂ ಅಮೆರಿಕಾದ ಗೌರವ ನಾಗರಿಕತ್ವ ಪಡೆದುಕೊಂಡಿದ್ದ ಮದರ್ ಥೆರೇಸಾ, ಭಾರತ ಮತ್ತು ವಿಶ್ವದಾದ್ಯಂತ ಸುಮಾರು 50 ವರ್ಷಗಳ ಕಾಲ ಸಾರ್ವಜನಿಕ ಸೇವೆ ಮಾಡಿದ್ದರು ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಮದರ್ ಥೆರೇಸಾ ಅವರ ಅಂಚೆ ಚೀಟಿಯನ್ನು ಅವರ ಹುಟ್ಟುಹಬ್ಬದ ದಿನವಾದ ಆಗಸ್ಟ್ 26ರಂದೇ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಅಂದು ಅವರ ಹುಟ್ಟುಹಬ್ಬದ ಶತಮಾನೋತ್ಸವವೂ ಹೌದು.

ಮದರ್ ಥೆರೇಸಾ ಅವರಿಗೆ 1996ರಲ್ಲಿ ಅಮೆರಿಕಾವು ಗೌರವ ನಾಗರಿಕತ್ವವನ್ನು ನೀಡಿತ್ತು. ಈ ಗೌರವ ಪಡೆದುಕೊಂಡ ನಾಲ್ಕನೇ ವ್ಯಕ್ತಿ ಥೆರೇಸಾ ಎಂಬುದು ವಿಶೇಷ. 1963ರಲ್ಲಿ ವಿನ್ಸ್ಟನ್ ಚರ್ಚಿಲ್, 1981ರಲ್ಲಿ ರಾವುಲ್ ವಾಲೆನ್‌ಬರ್ಗ್, 1984ರಲ್ಲಿ ವಿಲಿಯಮ್ ಪೆನ್ ಮತ್ತು ಹೆನ್ನಾ ಕಾಲೋವಿಲ್ ಪೆನ್ ಹಾಗೂ 2002ರಲ್ಲಿ ಮಾರ್ಕೀಸ್ ಡೇ ಲಾಫೆಯೇಟ್ ಈ ಗೌರವಕ್ಕೆ ಪಾತ್ರರಾಗಿರುವ ಉಳಿದವರು.
ಸಂಬಂಧಿತ ಮಾಹಿತಿ ಹುಡುಕಿ